“ಸುಮಂಗಲಿಯಾಗಿ ನನ್ನ ಅಂತ್ಯಸಂಸ್ಕಾರ ಮಾಡಬೇಡಿ, ಮುತ್ತೈದೆ ವಸ್ತುಗಳನ್ನು ದೂರ ಇಡಿ” ಡೆತ್ ನೋಟ್ ಬರೆದಿಟ್ಟು 25 ರ ನವವಿವಾಹಿತೆ ಆತ್ಮಹತ್ಯೆ!!!
ಮದುವೆಯಾದ ನವವಿವಾಹಿತೆಯೋರ್ವಳು ಕೇವಲ 3 ತಿಂಗಳಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೇ ತನ್ನ ಜೀವನವನ್ನು ಕೊನೆಗಾಣಿಸಿದ್ದಾಳೆ. ಹರಿಯಾಣದ ಸೈಬರ್ ಸಿಟಿ ಗುರ್‌ಗಾಂವ್‌ನಲ್ಲಿ ಈ ಘಟನೆ ನಡೆದಿದೆ. ಗುರ್‌ಗಾಂವ್‌ನ ಕಾರ್ಟರ್ ಪುರಿ ಗ್ರಾಮದಲ್ಲಿ 25 ವರ್ಷದ ನವವಿವಾಹಿತೆ ರಿತು ತನ್ನ ಕೈ ಮೇಲೆ ಆತ್ಮಹತ್ಯೆ ಪತ್ರ ಬರೆದುಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾಳೆ. ಅಷ್ಟು ಮಾತ್ರವಲ್ಲದೇ, ಸೂಸೈಡ್ ನೋಟ್ನಲ್ಲಿ ನನ್ನ ಅತ್ತಿಗೆ ನನ್ನ ಮುಖವನ್ನೂ ನೋಡಬಾರದು ಎಂದು ಕೊನೆಯ ಆಸೆಯನ್ನು ಬರೆದಿದ್ದಾಳೆ. ಕೈಯಲ್ಲಿ ಬರೆದಿರುವ ಸೂಸೈಡ್ ನೋಟ್ ಮಾತ್ರವಲ್ಲದೇ, ಐದು ಪುಟಗಳಲ್ಲಿ …