‘SSLC ಪಾಸ್ ವಿದ್ಯಾರ್ಥಿ’ಗಳೇ ಗಮನಿಸಿ:  ‘ಡಿಪ್ಲೋಮಾ ಕೋರ್ಸ್’ ಪ್ರವೇಶಕ್ಕೆ ಅರ್ಜಿ ಇಂದಿನಿಂದಲೇ ಸಲ್ಲಿಕೆ ಆರಂಭ!

ಬೆಂಗಳೂರು: ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ, 2022-23ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿನ ಅನುದಾನಿತ ಕೋರ್ಸುಗಳಿಗೆ ಪ್ರಥಮ ಸೆಮಿಸ್ಟರ್ ಇಂಜಿನಿಯರಿಂಗ್ ಹಾಗೂ ನಾನ್-ಇಂಜಿನಿಯರಿಂಗ್ ಡಿಪ್ಲೋಮಾ ಕೋರ್ಸ್ ಗಳ ಪ್ರವೇಶಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್ ಗಳ ಮೆರಿಟ್ ಆಧಾರಿತ ಕಾಲೇಜುವಾರು ಮತ್ತು ಕೋರ್ಸುಗಳಿಗೆ ಮಾತ್ರ ಪ್ರವೇಶ ಬಯಸುವ ಅಭ್ಯರ್ಥಿಗಳು ಕೋರ್ಸುಗಳ ಆಯ್ಕೆಗಳನ್ನು ಅವರ ಇಚ್ಛಾನುಸಾರ ಆದ್ಯತಾ ಪಟ್ಟಿಯಲ್ಲಿ ನಮೂದಿಸಿ, ಮೆರಿಟ್ ಆಧಾರಿತ ಎಲ್ಲಾ ಕಾಲೇಜುಗಳಿಗೆ ಒಂದೇ ಅರ್ಜಿಯನ್ನು ಸಮೀಪದ ಯಾವುದೇ ಸರ್ಕಾರಿ ಪಾಲಿಟೆಕ್ನಿಕ್ ಗಳ ಪ್ರಾಂಶುಪಾಲರಿಗೆ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ನೀಡಿರುವ ಆಧ್ಯತೆ ಮತ್ತು ಮೆರಿಟ್ ಹಾಗೂ ರೋಷ್ಟರ್ ಗೆ ಅನುಗುಣವಾಗಿ ಆನ್ ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು. ಇಲಾಖೆಯ ಅಧಿಕೃತ ವೆಬ್ 3dtetech.karnataka.gov.in/kartechnical ಅಥವಾ dtek.karnataka.gov.in ನಲ್ಲಿ ಅರ್ಜಿಯನ್ನು ದಿನಾಂಕ 19-05-2022ರ ಇಂದಿನಿಂದ ಮಾಡಿಕೊಳ್ಳಬಹುದಾಗಿದೆ.

ದಿನಾಂಕ 26-05-2022 ರ ಸಂಜೆ 5.30 ರೊಳಗೆ ಭರ್ತಿ ಮಾಡಿದ ಅರ್ಜಿ ಹಾಗೂ ಆದ್ಯತಾ ಪಟ್ಟಿಯನ್ನು
ಸಮೀಪದ ಯಾವುದೇ ಸರ್ಕಾರಿ ಪಾಲಿಟೆಕ್ನಿಕ್ ಗಳ
ಪ್ರಾಂಶುಪಾಲರಿಗೆ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ವೆಬ್ ಸೈಟ್ ಹಾಗೂ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗೆ ಎಸ್ ಎಂ ಎಸ್ ಮೂಲಕವೂ ದಿನಾಂಕ 27-05-2022ರಂದು ಸಂಜೆ 5 ಗಂಟೆಗೆ ಪ್ರಕಟಿಸಲಾಗುತ್ತದೆ.

ಮೆರಿಟ್ ಪಟ್ಟಿಗೆ ಆಕ್ಷೇಪಣೆಗಳಿದ್ದರೇ ದಿನಾಂಕ 28-05 2022ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯೊಳಗೆ ಅಭ್ಯರ್ಥಿಗಳು ಸಮೀಪದ ಯಾವುದೇ ಸರ್ಕಾರಿ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಿಗೆ ಸಲ್ಲಿಸಬಹುದಾಗಿದೆ. ಅಂತಿಮ ಮೆರಿಟ್ ಪಟ್ಟಿಯನ್ನು ದಿನಾಂಕ 28-05-2022ರಂದು ಸಂಜೆ 5 ಗಂಟೆ ನಂತ್ರ ಪ್ರಕಟಿಸಲಾಗುತ್ತದೆ. ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ನಿಗಧಿತ ಶುಲ್ಕದೊಂದಿಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ದಿನಾಂಕ 31-05-2022ರಿಂದ 02-06 2022ರೊಳಗೆ ಪ್ರವೇಶ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿ ಈ ಕೆಳಗಿನ ಪಿಡಿಎಫ್ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.