ಚೇತನರಾಜ್ ಸಾವಿಗೆ ಆಘಾತಗೊಂಡಿರುವ ರಾಖಿ ಸಾವಂತ್ | ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಗುಡುಗಿದ “ಕ್ವಾಂಟ್ರವರ್ಸಿ ಕ್ವೀನ್ “

ಪೋಷಕರ ಸಮ್ಮತಿ ಇಲ್ಲದೆ ಫ್ಯಾಟ್ ರಿಡಕ್ಷನ್ ಸರ್ಜರಿಗೆ ಒಳಗಾಗಿದ್ದ ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಸಾವಿಗೀಡಾಗಿದ್ದರು. ಫ್ಯಾಟ್ ರಿಡಕ್ಷನ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡ ಪರಿಣಾಮ ಚೇತನಾ ರಾಜ್ ಮೃತಪಟ್ಟಿದ್ದರು.

ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಸಾವು ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ, ಕನ್ನಡ ಚಿತ್ರರಂಗದ ನಟಿಯರು ಶಾಕ್ ಆಗಿದ್ದಾರೆ. ಜೊತೆಗೆ, ಚಿತ್ರರಂಗದಲ್ಲಿರುವ ಬಾಡಿ ಶೇಮಿಂಗ್, ಬ್ಯೂಟಿ ಸ್ಟಾಂಡರ್ಡ್ಸ್ ಬಗ್ಗೆ ದನಿಯೆತ್ತುತ್ತಿದ್ದಾರೆ. ಚೇತನಾ ರಾಜ್ ಸಾವಿನ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಇದೀಗ ಚೇತನಾ ರಾಜ್ ಸಾವಿನ ಬಗ್ಗೆ ಬಾಲಿವುಡ್ ಬೆಡಗಿ ರಾಖಿ ಸಾವಂತ್ ಕೂಡ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಚೇತನಾ ರಾಜ್ ಅವರ ಸಾವಿನ ಸುದ್ದಿ ಕೇಳಿ ಆಘಾತಗೊಂಡಿರುವ ರಾಖಿ ಸಾವಂತ್ ವೀಡಿಯೋ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಜೊತೆಗೆ ಚೇತನಾ ರಾಜ್ ಸಾವಿಗೆ ಕಾರಣವಾದ ಆಸ್ಪತ್ರೆ ಮತ್ತು ವೈದ್ಯರ ಬಗ್ಗೆ ರಾಖಿ ಸಾವಂತ್ ಕಿಡಿಕಾರಿದ್ದಾರೆ.

ವೀಡಿಯೋದಲ್ಲಿ ರಾಖಿ ಸಾವಂತ್ ಹೇಳಿದ್ದೇನು?

“ಕನ್ನಡ ನಟಿ ಚೇತನಾ ರಾಜ್ ಪ್ಲಾಸ್ಟಿಕ್ ಸರ್ಜರಿಯಿಂದಾಗಿ ಸಾವನ್ನಪ್ಪಿದ ಸುದ್ದಿ ಕೇಳಿ ನನಗಂತೂ ತೀವ್ರ ಆಘಾತ ಉಂಟಾಗಿದೆ. ಚೇತನಾ ರಾಜ್ ಸಾವಿಗೆ ಕಾರಣವಾದ ಆಸ್ಪತ್ರೆ ಯಾವುದು, ವೈದ್ಯರು ಯಾರು ಅಂತ ನಾನು ತಿಳಿದುಕೊಳ್ಳಬೇಕು. ಆಕೆಗೆ ಕೇವಲ 21 ವರ್ಷ ವಯಸ್ಸು. ಆಕೆಯ ಜೀವ ತೆಗೆದ ಸರ್ಜರಿ ಯಾವುದು ಎಂಬುದು ನನಗೆ ಗೊತ್ತಾಗಬೇಕು. ಅಸಲಿಗೆ, ಆ ವೈದ್ಯನಿಗೆ ಡಾಕ್ಟರ್ ಡಿಗ್ರಿ ಕೊಟ್ಟವರು ಯಾರು? ಈಗಿನ ಕಾಲದಲ್ಲಿ ಯಾರು ಬೇಕಾದರೂ ಡಾಕ್ಟರ್ ಆಗಬಹುದು. ಯಾರು ಬೇಕಾದರೂ ನರ್ಸ್ ಆಗಬಹುದು. ಯಾರು ಬೇಕಾದರೂ ಪ್ಲಾಸ್ಟಿಕ್ ಸರ್ಜನ್ ಆಗಬಹುದು’

“ಸರಿಯಾದ ವೈದ್ಯರು ಬೇಕು ಅಂದ್ರೆ ಬಾಲಿವುಡ್ ಮಂದಿ ಅಥವಾ ನನ್ನನ್ನ ಕೇಳಿ. ಯಾವ ಡಾಕ್ಟರ್ ಬೆಸ್ಟ್ ಅಂತ ನಾವು ಗೈಡ್ ಮಾಡುತ್ತೇವೆ. ಯಾರ್ಯಾರೋ ಮಾತನ್ನ ನಂಬಿ ಆಪರೇಷನ್ ಥಿಯೇಟರ್‌ಗೆ ಹೋಗಬೇಡಿ. ಇದು ಖಂಡಿತ ಸರಿಯಲ್ಲ’ ಎಂದು ವೀಡಿಯೋದಲ್ಲಿ ರಾಖಿ ಸಾವಂತ್ ಹೇಳಿದ್ದಾರೆ.

Leave A Reply