15 ಸೆಕೆಂಡಿನ ವೀಡಿಯೋಗಾಗಿ ಕಾಡಿಗೇ ಬೆಂಕಿ ಇಟ್ಟ ಟಿಕ್ ಟಾಕ್ ಸ್ಟಾರ್ | ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್!!!

ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದರೆ ಮಾತ್ರವೇ ನಮ್ಮ‌ ಬದುಕು ಸಾರ್ಥಕ ಎನ್ನುವವರು ಈ ವೀಡಿಯೋ ಓದಲೇಬೇಕು. ಈ ಸೋಶಿಯಲ್ ಮೀಡಿಯಾದಿಂದ ಖ್ಯಾತಿ ಗಳಿಸಿದವರೆಷ್ಟೋ ಮಂದಿ ಇದ್ದಾರೆ. ಆದರೆ ಇನ್ನೂ ಕೆಲವರಿದ್ದಾರೆ, ಎಷ್ಟು ಬೇಗ ಸಾಧ್ಯವೋ ಅಷ್ಟು ಪ್ರಸಿದ್ಧಿ ಪಡೆಯಬೇಕು ಎಂಬ ಆಸೆ ಇರುವವರು.

ಹೀಗಾಗಿ, ಇವರು ಸುಲಭದ ದಾರಿಯನ್ನು ಹುಡುಕುತ್ತಾರೆ. ಜತೆಗೆ, ಬಹುಬೇಗ ಎಲ್ಲರ ಗಮನ ಸೆಳೆಯಬೇಕು ಎಂಬ ಕಾರಣಕ್ಕೆ ಯಾವ ಅಪಾಯಕಾರಿ, ಅತಿರೇಕದ ಹೆಜ್ಜೆ ಇಡುವುದಕ್ಕೂ ಸಿದ್ಧರಿರುತ್ತಾರೆ. ಇಂತಹ ಸಂದರ್ಭದಲ್ಲಿ ಬಹುತೇಕ ಅನಾಹುತಗಳೇ ನಡೆದು ಹೋಗುತ್ತದೆ. ಸದ್ಯ ಅಂತಹದ್ದೇ ದೃಶ್ಯ ವೈರಲ್ ಆಗುತ್ತಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇದು ಟಿಕ್‌ಟಾಕ್ ತಾರೆಯ ಅತಿರೇಕದ ದೃಶ್ಯ ಅಂತ ಹೇಳಬಹುದು. ಸಣ್ಣ ವೀಡಿಯೋಗಾಗಿ ಈಕೆ ಮಾಡಿರುವ ಕೃತ್ಯ ಈಗ ಎಲ್ಲರನ್ನು ಕೆಂಡಾಮಂಡಲರನ್ನಾಗುವಂತೆ ಮಾಡಿದೆ. ಯಾಕೆಂದರೆ, ಈಕೆ ಕಾಳ್ಗಿಚ್ಚಿನ ಎದುರು ವೀಡಿಯೋಗೆ ಪೋಸ್ ಕೊಟ್ಟು ಟೀಕೆಗೆ ಗುರಿಯಾಗಿದ್ದಾಳೆ.

ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ತಾರೆಯ ಮಾಡಿದ ಎಡವಟ್ಟು ಇದು. ಟಿಕ್‌ಟಾಕ್ ವೀಡಿಯೋಗಾಗಿ ಈಕೆಯೇ ಬೆಂಕಿ ಹಚ್ಚಿದ್ದಾಗಿಯೂ ಕೆಲವರು ಆರೋಪಿಸಿದ್ದಾರೆ. ಈಕೆಯ ಕೃತ್ಯ ಅತಿರೇಕದ ಪರಮಾವಧಿ ಎನ್ನದೆ ವಿಧಿಯೇ ಇಲ್ಲ…!

ಈ ಕ್ಲಿಪ್‌ನಲ್ಲಿ ಉರಿಯುತ್ತಿರುವ ಬೆಂಕಿಯ ಮುಂದೆ ಬಿಳಿ ಗೌನ್ ತೊಟ್ಟು ಹುಮೈರಾ ಆಸ್ಕರ್ ಬರುತ್ತಿರುವ ದೃಶ್ಯ ಇದೆ. `ಪಾಕಿಸ್ತಾನದ ಈ ಟಿಕ್‌ಟಾಕರ್ 15 ಸೆಕೆಂಡುಗಳ ವೀಡಿಯೋಗಾಗಿ ಕಾಡಿಗೆ ಬೆಂಕಿ ಹಚ್ಚಿದ್ದಾಳೆ. ಇದನ್ನು ನೋಡಿದ ಜನರು ಈಕೆಗೆ ಶಿಕ್ಷೆಯಾಗಬೇಕೆಂದು ಕಮೆಂಟ್ ಮಾಡ್ತಾ ಇದ್ದಾರೆ.

ಇನ್ನು ತನ್ನ ವಿರುದ್ಧ ಟೀಕೆಗಳು ಹೆಚ್ಚಾಗುತ್ತಿದ್ದಂತೆಯೇ ಈ ಮಾಡೆಲ್ ಮ್ಯಾನೇಜರ್ ಮೂಲಕ ಪರಿಸ್ಥಿತಿ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾಳೆ. `ತಾನು ಬೆಂಕಿ ಹಚ್ಚಿಲ್ಲ’ ಎಂದೂ ಈಕೆ ಹೇಳಿಕೆಯೊಂದನ್ನು ನೀಡಿದ್ದಾಳೆ. ವಿಡಿಯೋ ವಿವಾದಕ್ಕೆ ವಸ್ತುವಾಗುತ್ತಿದ್ದಂತೆಯೇ ಇದನ್ನು ಡಿಲಿಟ್ ಕೂಡಾ ಮಾಡಲಾಗಿದೆ. ಆದರೆ, ಅಷ್ಟರಲ್ಲೇ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು.

Leave a Reply

error: Content is protected !!
Scroll to Top
%d bloggers like this: