ವಿದ್ಯಾರ್ಥಿನಿಯರ ಬಿಗ್ ಫೈಟ್ | ನಡುರಸ್ತೆಯಲ್ಲಿ ಜುಟ್ಟು ಹಿಡಿದು, ಹೊಡಿಮಗ ಹೊಡಿಮಗ ಎಂದ ಬಾಲಕಿಯರು!

ಜಗಳ, ಮುನಿಸು, ಕೋಪ ಬಾಲ್ಯದ ದಿನಗಳಲ್ಲಿ ಸಾಮಾನ್ಯ. ಹಾಗೆನೇ ಬಾಲ್ಯದಿಂದ ಕೌಮಾರ್ಯಕ್ಕೆ ತಲುಪಿದಾಗ, ಇನ್ನೂ ಹೆಚ್ಚಾಗಬಹುದು ಅಥವಾ ಕಡಿಮೆನೂ ಆಗಬಹುದು. ಈ ಶಾಲಾ ದಿನಗಳಲ್ಲಿ ಈ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೆಲವೊಂದು ವಿಷಯದಲ್ಲಿ ಕೆಲವರ ಬಗ್ಗೆ ಕೋಪ ಬರಬಹುದು. ಅದನ್ನು ಸರಿಮಾಡಿಕೊಂಡು ಅಲ್ಲಿಯೇ ಬಿಟ್ಟರೆ, ಲೈಫ್ ಸೂಪರ್. ಅದನ್ನು ಮುಂದುವರಿಸಿದರೆ ಎಡವಟ್ಟು‌ ಕಟ್ಟಿಟ್ಟಬುತ್ತಿ. ಅಂಥದ್ದೇ ಒಂದು ಘಟನೆ ವಿದ್ಯಾರ್ಥಿಗಳ ಮಧ್ಯೆ ನಡೆದಿದೆ.

ಹೌದು, ಇಲ್ಲೊಂದು ಕಡೆ ವಿದ್ಯಾರ್ಥಿನಿಯರು ನಡುರಸ್ತೆಯಲ್ಲೇ ಬಡಿದಾಡಿಕೊಂಡಿದ್ದಾರೆ. ಎರಡು ವಿದ್ಯಾರ್ಥಿನಿಯರ ಗುಂಪು ನಡು ರಸ್ತೆಯಲ್ಲಿ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ನಡು ರಸ್ತೆಯಲ್ಲಿ ವಿದ್ಯಾರ್ಥಿನಿಯರ ಹೊಡೆದಾಟದ ದೃಶ್ಯ ವನ್ನು ಸಾರ್ವಜನಿಕರು ತಮ್ಮ‌ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ವೀಡಿಯೋ ವೈರಲ್ ಆಗಿದೆ‌. ಇವರಲ್ಲಿ ಬಹಳಷ್ಟು ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿದ್ದು, ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಪ್ರೀತಿಗಾಗಿ ಈ ಜಗಳವೇ ಅಥವಾ ಒಳ ವೈಮನಸ್ಸು ಸ್ಫೋಟಿಸಿತೇ? ಯಾವ ಕಾರಣ, ಏಕೆ ಎಂದು ಇನ್ನು ಮುಂದಷ್ಟೇ ತಿಳಿಯಬೇಕಾಗಿದೆ. ಆದರೂ ಸಾರ್ವಜನಿಕವಾಗಿ ಈ ರೀತಿ ಜುಟ್ಟು ಹಿಡಿದುಕೊಂಡು ಜಗಳ ಮಾಡಿದ ವಿದ್ಯಾರ್ಥಿನಿಯರ ನಡೆ ಎಲ್ಲರ ಬಾಯಿಗೆ ಆಹಾರವಾಗಿರುವುದಂತೂ ಸುಳ್ಳಲ್ಲ…

Leave a Reply

error: Content is protected !!
Scroll to Top
%d bloggers like this: