ಪ್ರೀತಿಸಿ, ನೀನೇ ಬೇಕು ಎಂದು ಹಠಕ್ಕೆ ಬಿದ್ದು, ಮದುವೆಯಾದ ಜೋಡಿ | ಫಸ್ಟ್ ನೈಟ್ ದಿನ ನೀನು ಬೇಡ ಎಂದ ಯುವತಿ!!!

ಇದೆಂಥಪ್ಪಾ ವಿಚಿತ್ರ ಪ್ರಕರಣ ಅಂದುಕೊಂಡಿದ್ದೀರಾ ? ಹೌದು…ಪ್ರೀತಿಸಿ, ಇಷ್ಟಪಟ್ಟ ಹುಡುಗಿ ನಂತರ ಮದುವೆಯಾಗಿ ನನಗೆ ಗಂಡ ಒಲ್ಲೆ ಎಂದು ಹೇಳಿದ್ದಾಳೆ. ಹಾಗಿದ್ದರೆ ಈಕೆ ಮದುವೆ ಆಗುವ ಉದ್ದೇಶವೇನಿತ್ತು ? ಪ್ರೀತಿಯ ನಾಟಕವಾಡಿದಳೇ ? ಏನಿದು ಮರ್ಮ, ಮುಂದಿದೆ ಉತ್ತರ!!!

ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಪ್ರೇಮ ವಿವಾಹದ ನಂತರ ವಧು ಹನಿಮೂನ್‌ನಲ್ಲಿ ಪತಿಯೊಂದಿಗೆ ದೈಹಿಕ ಸಂಬಂಧವನ್ನು ನಿರಾಕರಿಸಿ ಮರುದಿನ ವಿಚ್ಛೇದನ ನೀಡಿದ್ದಾಳೆ. ಈ ಪ್ರಕರಣ ಜನರಲ್ಲಿ ನಿಜಕ್ಕೂ ಅಚ್ಚರಿ ಮೂಡಿಸಿದೆ. ಪ್ರೇಮವಿವಾಹ ಆದ ಮೇಲೂ ಯಾಕೆ ಇಂತಹ ಹೆಜ್ಜೆ ಇಟ್ಟಿದ್ದಾರೆ ಎಂಬುವುದೇ ಸದ್ಯದ ಪ್ರಶ್ನೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಮೊರಾದಾಬಾದ್ ನಗರದಲ್ಲಿ ನೆಲೆಸಿರುವ ಈ ಯುವತಿ ತನ್ನ ಸಹೋದರಿಯ ಮೈದುನ ಜತೆ ನಾಲ್ಕು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದಳು. ಆ ಹುಡುಗ ಸೋನಿಪತ್ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಇಂಜಿನಿಯರ್. ಕೆಲಸಕ್ಕೆ ಸಂಬಂಧಿಸಿದಂತೆ, ಆತ ಆಗಾಗ್ಗೆ ಮೊರಾದಾಬಾದ್‌ಗೆ ಬರಬೇಕಾಗಿತ್ತು, ಹಾಗಾಗಿ ಆತ ತನ್ನ ಅತ್ತಿಗೆಯ ಮನೆಯಲ್ಲಿರುತ್ತಿದ್ದ. ಈ ಸಂದರ್ಭದಲ್ಲಿ ಈ ಯುವತಿ ಮತ್ತು ಯುವಕನ ಮಧ್ಯೆ ಪ್ರೇಮಾಂಕುರವಾಗಿದೆ.

ನಂತರ ಯುವತಿ, ಅಕ್ಕನ ಮೈದುನನ ಮೇಲಿನ ಪ್ರೀತಿಯನ್ನು ಮನೆಯವರಿಗೂ ತಿಳಿಸಿದ್ದಾಳೆ. ಆರಂಭದಲ್ಲಿ ಈ ಮದುವೆಗೆ ಮನೆಯವರು ಒಪ್ಪದಿದ್ದರೂ ಮಗಳ ಒತ್ತಾಯಕ್ಕೆ ಮಣಿದು ಒಪ್ಪಿಗೆ ಸೂಚಿಸಿದ್ದಾರೆ ಹಾಗೂ ಮದುವೆ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಥೆಯಲ್ಲಿ ಟ್ವಿಸ್ಟ್ ಇರುವುದು ಈಗ. ಆದರೆ, ಮದುವೆಯಾದ ಮರುದಿನ ಯುವತಿ ತನ್ನ ತಾಯಿಯ ಮನೆಗೆ ಬಂದಿದ್ದಳು. ನಂತರ ಮರಳಿ ತನ್ನ ಅತ್ತೆಯ ಮನೆಗೆ ಹೋಗಲು ಇಷ್ಟ ಪಡಲಿಲ್ಲ. ಹಲವು ಬಾರಿ ಕುಟುಂಬಸ್ಥರು ಆಕೆಯ ಮನವೊಲಿಸಲು ಯತ್ನಿಸಿದರೂ ಯುವತಿ ಒಪ್ಪಿಕೊಳ್ಳಲು ಮುಂದಾಗಿರಲಿಲ್ಲ. ಒತ್ತಡ ಹೇರಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದೂ ಬೆದರಿಕೆ ಕೂಡಾ ಹಾಕಿದ್ದಾಳೆ.

ಇದಾದ ಬಳಿಕ ವಿಷಯ ನಾರಿ ಉತ್ಥಾನ ಕೇಂದ್ರಕ್ಕೆ ಹೋಯಿತು, ಅಲ್ಲಿ ಸಲಹೆಗಾರ್ತಿ ರಿತು ನಾರಂಗ್ ಕೂಡ ಮನವೊಲಿಸಲು ಪ್ರಯತ್ನಿಸಿದಳು, ಆದರೆ ಯುವತಿ ಯಾರ ಮಾತನ್ನು ಕೇಳಲಿಲ್ಲ ಮತ್ತು ಅಂತಿಮವಾಗಿ ಎರಡೂ ಕಡೆಯವರ ಒಪ್ಪಿಗೆಯೊಂದಿಗೆ ಅವರು ವಿಚ್ಛೇದನ ಪಡೆದಿದ್ದಾರೆ.

ಇಲ್ಲಿಯವರೆಗೂ ಈ ಯುವತಿ ಮನಸ್ಸಿನಲ್ಲಿ ಏನಿತ್ತು ? ಅನ್ನೋದನ್ನು ಯಾರಿಗೂ ಕಂಡು ಹಿಡಿಯಲಾಗಲಿಲ್ಲ. ಪ್ರೀತಿ ಮಾಡಿದ್ಯಾಕೆ? ಮದುವೆ ಆಗಿದ್ಯಾಕೆ ? ಗಂಡನ ಮನೆಗೆ ಹೋಗಲ್ಲ ಅಂದದ್ಯಾಕೆ ?

Leave a Reply

error: Content is protected !!
Scroll to Top
%d bloggers like this: