KPSC ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಪರೀಕ್ಷೆಗೆ ತಯಾರಿ ಯಾವ ರೀತಿ ಮಾಡಬೇಕು?

ಕೆಎಎಸ್ / ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳೆಂದರೆ
ಕರ್ನಾಟಕ ಲೋಕಸೇವಾ ಆಯೋಗವು( KPSC) ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಗಳಲ್ಲಿ ಅಗತ್ಯ ಗ್ರೂಪ್ ಎ ಹುದ್ದೆಗಳನ್ನು ಭರ್ತಿ ಮಾಡುತ್ತಾ ಇರುತ್ತದೆ. ಈ ಹುದ್ದೆಗಳನ್ನೇ ಕೆಎಎಸ್/ ಗೆಜೆಟೆಡ್ ಪ್ರೊಬೇಷನರ್ ಹುದ್ದೆ ಎಂದು ಹೇಳುತ್ತೇವೆ.

ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಅತಿ ಹೆಚ್ಚು ಅಂಕಗಳನ್ನುಗಳಿಸಿದರೆ ಮಾತ್ರ ಹುದ್ದೆಗಳಿಸಬಹುದು. ಇಲ್ಲಿ ನಾವು ಕೆಎಎಸ್ / ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಓದಬೇಕಾದ ಕೆಲವು ಕಡ್ಡಾಯ /ಹೆಚ್ಚು ಅಂಕಗಳಿಸಲು ಉತ್ತಮ ಪುಸ್ತಕಗಳ ಲಿಸ್ಟ್ ಅನ್ನು ಈ ಕೆಳಗಿನಂತೆ ನೀಡಲಾಗಿದೆ.

ಕೆಎಎಸ್ / ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ಎರಡಕ್ಕೂ ಈ ಕೆಳಗಿನ ಪುಸ್ತಕಗಳನ್ನು ಓದಬೇಕು ಎನ್ನುತ್ತಾರೆ ಹುದ್ದೆ ಗಿಟ್ಟಿಸಿದವರು.

  1. ಕರ್ನಾಟಕ ಹ್ಯಾಂಡ್ ಬುಕ್ ( ಪ್ರಮುಖ ವಿಷಯಗಳ ಆಧಾರಿತ)
  2. ಕರ್ನಾಟಕ ಬಜೆಟ್ ಹ್ಯಾಂಡ್ ಬುಕ್
  3. ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯ 6ನೇ ತರಗತಿ ಇಂದ 10ನೇ ತರಗತಿ ವರೆಗಿನ ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ಪಠ್ಯ ಪುಸ್ತಕಗಳು.
  4. ಭಾರತೀಯ ರಾಜಕೀಯ – ಲಕ್ಷ್ಮೀಕಾಂತ್
    5.vಫಿಸಿಕಲ್ ಜಿಯೋಗ್ರಫಿ – GC Leong
  5. ಕರ್ನಾಟಕ ಭೂಗೋಳಶಾಸ್ತ್ರ
    7.ಕರ್ನಾಟಕ ಇತಿಹಾಸ – ರಂಗನಾಥ್
  6. ಇಂಗ್ಲೀಷ್ ವ್ಯಾಕರಣ – ಮಾರ್ಟಿನ್ ಮತ್ತು ರೆನ್ (ಅಭ್ಯರ್ಥಿಗೆ ಓದಲು ಸರಿ ಎನ್ನುವ ವ್ಯಾಕರಣ ಪುಸ್ತಕ ಯಾವುದಾದರೂ)

ಪ್ರಚಲಿತ ವಿದ್ಯಮಾನಗಳಿಗೆ ದಿನಪತ್ರಿಕೆಗಳು,
ಪ್ರಚಲಿತ ವಿದ್ಯಮಾನಗಳಿಗೆ ಓದಬೇಕಾದ ನಿಯತಕಾಲಿಕೆಗಳು: ಸ್ಪರ್ಧಾವಿಜೇತ, ಸ್ಪರ್ಧಾಸ್ಫೂರ್ತಿ, ಸ್ಪರ್ಧಾಚೈತ್ರ, ಇತರೆ.

ಹೆಚ್ಚಿನ ಓದಿಗಾಗಿ, ಎನ್‌ಸಿಇಆರ್‌ಟಿ’ಯ 12ನೇ ತರಗತಿಯ ಭೂಗೋಳಶಾಸ್ತ್ರ ಪುಸ್ತಕ,
ಎನ್‌ಸಿಇಆರ್‌ಟಿ’ಯ 6-12ನೇ ತರಗತಿ ಪುಸ್ತಕಗಳು ಅಟ್ಲಾಸ್, ಮ್ಯಾಪ್ ಬುಕ್.

Leave A Reply