ದುಸ್ವಪ್ನ : ದೇವಸ್ಥಾನದಿಂದ ಕದ್ದ ವಿಗ್ರಹಗಳನ್ನು ವಾಪಸ್ ಮಾಡಿದ ಕಳ್ಳರು!

ಮಿಶ್ರಲೋಹದಿಂದ ತಯಾರಿಸಿದ ದೇಗುಲದಲ್ಲಿ ದರೋಡೆ ಮಾಡಿ ತಾವು ಕದ್ದೊಯ್ದಿದ್ದ ಅಪಾರ ಮೌಲ್ಯದ ವಿಗ್ರಹಗಳನ್ನು ಕಳ್ಳರು ವಾಪಸ್ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ನಡೆದಿದೆ. ಈ ಕುರಿತು ದೇಗುಲಕ್ಕೆ ಪತ್ರಕೂಡ ಬರೆದಿರುವ ಖತರ್ನಾಕ್ ಕಳ್ಳರು, ದೇಗುಲದಲ್ಲಿ ಕಳ್ಳತನ ಮಾಡಿದ ಬಳಿಕ ತಮಗೆ ರಾತ್ರಿ ವೇಳೆ ಕೆಟ್ಟ ಕನಸುಗಳು ಬೀಳುತ್ತಿದ್ದು, ತಾವು ದುಃಸ್ವಪ್ನದಿಂದ ಬಳಲುತ್ತಿದ್ದೇವೆ ಎಂದು ಆಳಲು ತೋಡಿಕೊಂಡಿದ್ದಾರೆ.

ಅಲ್ಲದೆ ಚಿತ್ರಕೂಟದ ಬಾಲಾಜಿ ದೇವಸ್ಥಾನದಿಂದ ಅಷ್ಟಧಾತು 16 ಅಮೂಲ್ಯ ವಿಗ್ರಹಗಳನ್ನು ಕದ್ದೊಯ್ದು ಕಳ್ಳರು ಅದರಲ್ಲಿ 14 ವಿಗ್ರಹಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರ ಮನೆ ಬಳಿ ಭಾನುವಾರ ಬಿಟ್ಟು ಹೋಗಿದ್ದಾರೆ.

ಪತ್ರದಲ್ಲಿ ಕಳ್ಳರು ಅಪರಾಧ ಎಸಗಿದ ನಂತರ ದುಃಸ್ವಪ್ನ ಕಾಣುತ್ತಿದ್ದು, ಭಯದಿಂದಲೇ ಕೊಳ್ಳೆ ಹೊಡೆದ ವಿಗ್ರಹಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ ಎಂದು ಬರೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಇದೇ ಮೇ 9 ರಂದು ತರೌನ್ಹಾದಲ್ಲಿರುವ ಪುರಾತನ ಬಾಲಾಜಿ ದೇವಾಲಯದಿಂದ ಹಲವಾರು ಕೋಟಿ ಮೌಲ್ಯದ 16 ಅಷ್ಠಧಾತು ವಿಗ್ರಹಗಳನ್ನು ಕಳವು ಮಾಡಲಾಗಿತ್ತು.

Leave A Reply

Your email address will not be published.