ಕಟಪಾಡಿ: ರಿಯಲ್ ಎಸ್ಟೇಟ್ ಉದ್ಯಮಿ ನಾಪತ್ತೆ!! ಕಾಪು ಠಾಣೆಯಲ್ಲಿ ಪ್ರಕರಣ ದಾಖಲು-ಪತ್ತೆಗೆ ಮನವಿ

ಉಡುಪಿ: ಜಿಲ್ಲೆಯ ಕಟಪಾಡಿ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಮನೆಯಿಂದ ನಾಪತ್ತೆಯಾದ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಕಟಪಾಡಿ ನಿವಾಸಿ, ಉದ್ಯಮಿ ಪ್ರಕಾಶ್(46) ಎಂದು ಗುರುತಿಸಲಾಗಿದೆ. ಮೇ 09ರ ಮುಂಜಾನೆ ಬಾರ್ಕೂರಿನ ದೇವಸ್ಥಾನಕ್ಕೆಂದು ಮನೆಯಿಂದ ಹೊರಟು ಹೋಗಿದ್ದ ಅವರು ವಾಪಸ್ಸು ಮನೆಗೆ ಬಾರದೆ, ದೂರವಾಣಿ ಕರೆಗೂ ಸಿಗದೇ ನಾಪತ್ತೆಯಾಗಿದ್ದಾರೆ.

ಪ್ರಕಾಶ್ ಅವರು ವಿವಾಹಿತರಾಗಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಕನ್ನಡ, ಹಿಂದಿ, ತುಳು ಭಾಷೆ ಬಲ್ಲವರಾಗಿದ್ದು ಸಾಮಾನ್ಯ ಮೈಕಟ್ಟು ಹೊಂದಿರುವ ಇವರು ನಾಪತ್ತೆಯಾದ ದಿನ ನೀಲಿ ಬಣ್ಣದ ಟೀ-ಶರ್ಟ್ ಹಾಗೂ ಕಂದು ಬಣ್ಣದ ಪ್ಯಾಂಟ್ ಧರಿಸಿದ್ದರು.ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕಾಪು ಪೊಲೀಸ್ ಠಾಣೆಯ 0820-2551033 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.

Leave A Reply