ಒಬ್ಬಳೇ ಮಹಿಳೆಯ ಮೋಹದಲ್ಲಿ ಅನೈತಿಕ ಸಂಬಂಧ ಬೆಳೆಸಿದ ಇಬ್ಬರು ಜೀವದ ಗೆಳೆಯರು: ಮುಂದೆ ಆಗಿದ್ದು ಮಾತ್ರ ಘೋರ ದುರಂತ !

ಅವರಿಬ್ಬರು ಸ್ನೇಹಿತರು. ಒಂದೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರಿಬ್ಬರ ಮಧ್ಯೆ ಯಾವುದೇ ಮುಚ್ಚು ಮರೆಯಿರಲಿಲ್ಲ. ಹೀಗೆ ಚೆನ್ನಾಗಿ ಸಾಗುತ್ತಿತ್ತು ಅವರ ಜೀವನ. ಅನಂತರ ಅವರ ಜೀವನಕ್ಕೆ ಎಂಟ್ರಿ ಕೊಟ್ಲು ಓರ್ವ ಮಹಿಳೆ. ಆಕೆಯ ಪ್ರೇಮಪಾಶದಲ್ಲಿ, ಅನೈತಿಕ ಸಂಬಂಧ ಬೆಳೆಸಿ ಬಿಟ್ಟರು ಈ ಸ್ನೇಹಿತರು. ಆದರೆ ಮುಖ್ಯವಾದ ವಿಷಯವೇನೆಂದರೆ ಈ ಅನೈತಿಕ ಸಂಬಂಧದ ವಿಷಯವನ್ನು ಗೆಳೆಯರು ಒಬ್ಬರಿಗೊಬ್ಬರು ಹೇಳಿರಲಿಲ್ಲ. ಆದರೆ ಗೊತ್ತಾದಾಗ ನಡೆದದ್ದು ಮಾತ್ರ ಭೀಕರ ದುರಂತ.

ಈ ಘಟನೆ ನಡೆದಿರುವುದು ರಾಯಚೂರಿನಲ್ಲಿ. ಮಸ್ಕಿ ತಾಲ್ಲೂಕಿನ ತಲೆಖಾನ್ ನಿವಾಸಿಯಾದಂತ ಬಸವರಾಜ್ (35) ಮತ್ತು ಜವಳಗೇರಾ ಮೂಲದ ಜಗದೀಶ್ ಹಟ್ಟೋಳಿ ಇಬ್ಬರೂ ಸ್ನೇಹಿತರು. ಚೆನ್ನಾಗಿದ್ದ ಇವರ ಜೀವನದಲ್ಲಿ ಓರ್ವ ಮಹಿಳೆ ಪ್ರವೇಶ ಮಾಡಿ, ಲೈಫು ದುರಂತಮಯವಾಯಿತು.

ಜಗದೀಶ್ ಗೆ ತಾನು ಅನೈತಿಕ ಸಂಬಂಧ ಹೊಂದಿದ ವ್ಯಕ್ತಿ ಜೊತೆಗೇನೇ ತನ್ನ ಸ್ನೇಹಿತ ಕೂಡಾ ಸಂಬಂಧ ಹೊಂದಿದ್ದಾನೆ ಎಂಬ ಮಾಹಿತಿ ಗೊತ್ತಾಗಿದೆ. ಅದಕ್ಕಾಗಿ ಆತನನ್ನು ಸಾಲ ಕೊಡಿಸುವ ನೆಪದಲ್ಲಿ ಊರಾಚೆ ಇರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾನೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದಿದ್ದಿಗಿ ಬಳಿಯಯಲ್ಲಿ ವ್ಯಕ್ತಿಯೊಬ್ಬನ ಶವ ಅರೆ ಬೆಂದ ಸ್ಥಿತಿಯಲ್ಲಿ ಮೇ.9ರಂದು ಸಾರ್ವಜನಿಕರಿಗೆ ತಿಳಿದು, ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಬಳಗಾನೂರು ಠಾಣೆಯ ಪೊಲೀಸರು, ವ್ಯಕ್ತಿಯ ಕೈಯಲ್ಲಿದ್ದಂತ ಉಂಗುರ, ಚಪ್ಪಲಿಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ.

ಈ ಸಂದರ್ಭದಲ್ಲಿಯೇ ಬಸವರಾಜ ಮಿಸ್ಸಾಗಿರೋದಾಗಿ ಕುಟುಂಬಸ್ಥರು ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ, ಕಾಣೆಯಾದ ವ್ಯಕ್ತಿಯ ಗುರುತು ಪತ್ತೆಗೆ ಇಳಿದಂತ ಪೊಲೀಸರಿಗೆ, ಸಿಂಧನೂರು ತಾಲೂಕಿನ ದಿದ್ದಿಗೆ ಬಳಿ ಸುಟ್ಟು ಕರಕಲಾದಂತ ವ್ಯಕ್ತಿಯ ಅಪರಿಚಿತ ಶವ ಬಸವರಾಜ್ ಎಂಬುದಾಗಿ ತಿಳಿದು ಬಂದಿದೆ.

ವ್ಯಕ್ತಿಯ ಗುರುತು ಪತ್ತೆಯಾಗುತ್ತಿದ್ದಂತೇ, ಸಾವಿನ ಹಿಂದಿನ ರಹಸ್ಯ ಬೇಧಿಸಲು ಇಳಿದಂತ ಪೊಲೀಸರಿಗೆ, ಆತನನ್ನು ಕೊಲೆ ಮಾಡಿದ್ದು ಆತನ ಸ್ನೇಹಿತ ಎಂದು ತಿಳಿದು ಬಂದಿದೆ. ಜಗದೀಶ್ ನನ್ನು ಬಂಧಿಸಿದ ಪೊಲೀಸರು ವಿಚಾರಣೆ ಮಾಡಿದಾಗ ಸತ್ಯ ಹೇಳಿದ್ದಾನೆ. ಈಗ ಆರೋಪಿ ಕಂಬಿ ಹಿಂದೆ ಇದ್ದಾನೆ.

Leave A Reply