ರಾಜ್ಯಕ್ಕೆ ಎಂಟ್ರಿ ಕೊಟ್ಟ ಶಂಕಿತ ಟೊಮ್ಯಾಟೋ ವೈರಸ್ | ಎಲ್ಲೆಡೆ ಕಟ್ಟೆಚ್ಚರ!!!

ಕೇರಳದಲ್ಲಿ ಕಂಡುಬಂದ ಮಹಾಮಾರಿ ಟೊಮ್ಯಾಟೋ ಜ್ವರ ರಾಜ್ಯಕ್ಕೂ ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಾಗಿ ಐದು ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುವ ಈ ಜ್ವರ ಈಗ ರಾಜ್ಯಕ್ಕೂ ಲಗ್ಗೆ ಇಟ್ಟಿದೆ. ನಾಲ್ಕು ವರ್ಷದ ಮಗುವಿಗೆ ಶಂಕಿತ ಟೊಮ್ಯಾಟೊ ಜ್ವರ ತಗುಲಿರುವ ಶಂಕೆ ವ್ಯಕ್ತವಾಗಿದೆ.

ಕೇರಳ ಗಡಿಭಾಗದ ಉಡುಪಿ ಜಿಲ್ಲೆಯಲ್ಲಿ ಟೊಮ್ಯಾಟೊ ವೈರಸ್ ಕಂಡುಬಂದಿದ್ದು ಸೋಂಕಿತ ಮಗುವನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಂಕಿತ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗದಲ್ಲಿ ನಿಗಾವಹಿಸಲಾಗಿದೆ ಎಂದು ಹೇಳಲಾಗಿದೆ.

ಮಕ್ಕಳಲ್ಲಿ ಶಂಕಿತ ಟೊಮ್ಯಾಟೊ ವೈರಸ್ ಕಾಣಿಸಿಕೊಂಡಿದೆ. ಆದರೆ, ಆತಂಕಪಡುವ ಅಗತ್ಯವಿಲ್ಲ. ಶಂಕಿತ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಕರಣಗಳು ಕಂಡುಬಂದಲ್ಲಿ ಚಿಕಿತ್ಸೆ ನೀಡಲು ಆದೇಶ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Leave A Reply

Your email address will not be published.