ಮಂಗಳೂರು : ಕ್ರಿಕೆಟ್ ಪಂದ್ಯಾಟದ ವೇಳೆ ಕ್ಯಾಚ್ ಹಿಡಿಯಲು ಹೋಗಿ ಆಟಗಾರನಿಗೆ ಗಂಭೀರ ಗಾಯ!

ಮಂಗಳೂರು: ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ವೇಳೆಯಲ್ಲಿ, ಕ್ಯಾಚ್ ಹಿಡಿಯಲು ಹೋಗಿ ಆಟಗಾರನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರಿನಲ್ಲಿ ಉರ್ವ ಮೈದಾನದಲ್ಲಿ ನಿನ್ನೆ ನಡೆದಿದೆ.

ಗಾಯಗೊಂಡ ಆಟಗಾರನನ್ನು ಉರ್ವದ ಸಂದೀಪ್ ಎಂದು ಗುರುತಿಸಲಾಗಿದೆ.

ನೂತನ್ ಫ್ರೆಂಡ್ಸ್ ವತಿಯಿಂದ ನಿನ್ನೆ ಉರ್ವ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ಬಾಲ್ ಕ್ಯಾಚ್ ಹಿಡಿಯಲು ಹೋದಾಗ, ಕ್ರಿಕೆಟ್ ಆಟಗಾರ ಸಂದೀಪ್ ಗಾಯಗೊಂಡಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave A Reply