ಸೀರೇಲಿ ಹುಡುಗೀರ ನೋಡಲೇ ಬಾರದು ನಿಲ್ಲಲ್ಲ ಟೆಂಪ್ರೇಚರು…ಉರ್ಫಿ ನ್ಯೂ ಹಾಟ್ ಲುಕ್ !!!

ಕಿರುತೆರೆ ನಟಿ, ಮಾಡೆಲ್ ಉರ್ಫಿ ಜಾವೇದ್ ಪ್ರತಿದಿನ
ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಯಾಕೆ ಎಂದು ಗೊತ್ತಿಲ್ಲ, ಈಕೆಗೆ ಬಟ್ಟೆ ಇಷ್ಟವಿಲ್ಲವೋ, ಅಥವಾ ಬಟ್ಟೆ ಈಕೆಯ ಮೈಯಲ್ಲಿ ನಿಲ್ಲುವುದಿಲ್ಲವೋ…ಇದಕ್ಕೆ ಉರ್ಫಿನೇ ಉತ್ತರ ಕೊಡಬೇಕು. ಹಾಗಾಗಿಯೇ ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ
ಪಡ್ಡೆ ಹುಡುಗ ನಿದ್ದೆಗೆಡಿಸಿದ್ದು ಸುಳ್ಳಲ್ಲ.

ಇತ್ತೀಚೆಗಷ್ಟೇ ಸಮುದ್ರದಲ್ಲಿ ನಿಂತು ಗಾಳಿಗೆ ಮೈಯೊಡ್ಡಿರುವ ಉರ್ಫಿ ಸಮುದ್ರದ ಚಿಪ್ಪಿನ ಬ್ರಾ ಜೊತೆಗೆ ಕಾಣಿಸಿಕೊಂಡಿದ್ದಾರೆ. ಒಳ ಉಡುಪು ಧರಿಸದೆ ಪಾರದರ್ಶಕ ಬಟ್ಟೆ ಸುತ್ತಿಕೊಂಡಿರುವ ಉರ್ಫಿ ಕ್ಯಾಮರಾಗೆ ಮುಂದೆ ಪೋಸ್ ನೀಡಿದ್ದು ಸಖತ್ ಹಾಟ್ ಆಗಿ ಮಿಂಚಿದ್ದರು. ಆದರೆ ಈಗ ಉರ್ಫಿಯ ಈ ಮತ್ತೊಂದು ಹೊಸ ಅವತಾರ ನೋಡಿ ನೆಟ್ಟಿಗರ ಹೃದಯ ಬಾಯಿಗೆ ಬಂದಿರಲೂಬಹುದು.


Ad Widget

Ad Widget

Ad Widget

ಆದರೆ ಈ ಬಾರಿ ವಿಚಿತ್ರವಾಗಿ ಸೀರೆ ಧರಿಸುವ ಮೂಲಕ ಉರ್ಫಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಉರ್ಫಿಯ ಹಾಟ್ ಸೀರೆ ಅವತಾರಕ್ಕೆ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಸೀರೆ ಅಂತ ಹೆಸರಿಗೆ ಮಾತ್ರ ಹೇಳಬೇಕೇನೋ? ಸೀರೆಯ ಸೆರಗು ಈಕೆಯ ಮೈಯಲ್ಲಿ ನಿಲ್ತಾ ಇಲ್ಲ. ಸೀರೆಯನ್ನು ಹೀಗೂ ಉಡಬಹುದು ಅಂತ ಉರ್ಫಿ ತೋರಿಸಿಕೊಟ್ಟಿದ್ದಾಳೆ ಅಂದರೆ ಜನ ಎರಡೆರಡು ಬಾರಿ ಹಿಂತಿರುಗಿ ನೋಡುವುದರಲ್ಲಿ ಎರಡು ಮಾತಿಲ್ಲ.

ಅರೆಬರೆ ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಉರ್ಫಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ಪ್ರತಿ ಬಾರಿಯೂ ವಿಚಿತ್ರವಾಗಿಯೇ ದರ್ಶನ ನೀಡುತ್ತಾರೆ. ಎಷ್ಟೇ ಟ್ರೋಲ್ ಆದರೂ ತಲೆಕೆಡಿಸಿಕೊಳ್ಳದ ಉರ್ಫಿ ದಿನಕ್ಕೊಂದು ವೇಷದಲ್ಲಿ ಕಾಣಿಸಿಕೊಳ್ಳುವುದನ್ನು ಮಾತ್ರ ಬಿಟ್ಟಿಲ್ಲ.

Leave a Reply

error: Content is protected !!
Scroll to Top
%d bloggers like this: