ಇಂದು ವಿಶ್ವ ಕುಟುಂಬ ದಿನ; ಇತಿಹಾಸ- ಮಹತ್ವ

ಇಡೀ ವಿಶ್ವದಲ್ಲಿ ಮೇ 15 ರಂದು ವಿಶ್ವ ಕುಟುಂಬ ದಿನವನ್ನಾಗಿ ಆಚರಿಸುತ್ತಾರೆ. ವಿಶ್ವ ಸಂಸ್ಥೆ 1993 ರ ಮೇ 15ರಂದು ಜನರಲ್ ಅಸೆಂಬ್ಲಿಯಲ್ಲಿ ಅಂತರರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನು ಆಚರಿಸುವ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿತು. ಅಂದಿನಿಂದ ವಿಶ್ವವಿಡೀ ಪ್ರತಿ ವರ್ಷ ಮೇ 15ನ್ನು ಅಂತರರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನಾಗಿ ಆಚರಿಸುತ್ತಬಂದಿದ್ದೇವೆ. 

ವಸುದೈವ ಕುಟುಂಬಕಂ ಎಂಬೊಂದು ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದು ಕುಟುಂಬವೊಂದರ ಮಹತ್ವವನ್ನು ಸಾರುತ್ತದೆ. ಈ ಕುಟುಂಬ ಎಂಬ ಪರಿಕಲ್ಪನೆ ತುಂಬಾ ಪವಿತ್ರ ಮತ್ತು ಮಹತ್ವವಾದದ್ದು. ಪ್ರತಿಯೋರ್ವ ವ್ಯಕ್ತಿ ಮತ್ತು ಸಮಾಜವನ್ನು ಒಂದೆಡೆ ಕೇಂದ್ರೀಕರಿಸುವ ಈ ವ್ಯವಸ್ಥೆ ನಮ್ಮ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಬಹುಶಃ ಕುಟುಂಬವೆಂಬ ಪರಿಕಲ್ಪನೆ ಇಲ್ಲದಿದ್ದರೆ ಈ ಇಡೀ ಜಗತ್ತನ್ನು ಊಹಿಸಲೇ ಅಸಾಧ್ಯವಾಗುತ್ತಿತ್ತು. ಅಷ್ಟರ ಮಟ್ಟಿಗೆ ಕುಟುಂಬದ ಅಗತ್ಯ ನಮ್ಮ ವಿಶ್ವಕ್ಕೆ ಇದೆ. 

Leave A Reply

Your email address will not be published.