ಪುತ್ತೂರು: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ!! ತಲೆಮರೆಸಿಕೊಂಡಿದ್ದ ಸಲಿಂಗಕಾಮಿಯ ಬಂಧನ!!

ಪುತ್ತೂರು: ಇಲ್ಲಿನ ಕಾವು ಸೇತುವೆ ಬಳಿಯ ಕಾಡಿನಲ್ಲಿ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯವೆಸಗಿ ತಲೆ ಮರೆಸಿಕೊಂಡಿದ್ದ ಆರೋಪಿ ಶ್ರೀಜಿತ್ ನನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಘಟನೆ ವಿವರ:ಏಪ್ರಿಲ್ 21 ರಂದು ಅಪ್ರಾಪ್ತ ಬಾಲಕ ತನ್ನ ಅಜ್ಜಿ ಜೊತೆಗೆ ಪೇಟೆಗೆ ಬಂದು ಹಿಂದಿರುಗುತ್ತಿದ್ದ ವೇಳೆಗೆ ಆರೋಪಿ ಬೈಕಿನಲ್ಲಿ ಬಂದಿದ್ದು, ಅಜ್ಜಿ ಮನೆಗೆ ಬಿಡುವುದಾಗಿ ಹೇಳಿದ್ದನೆನ್ನಲಾಗಿದೆ. ಆರೋಪಿ ಬಾಲಕನಿಗೆ ಅಪರಿಚಿತನಾಗಿದ್ದು, ಆತನೊಂದಿಗೆ ತೆರಳಲು ಒಪ್ಪಲಿಲ್ಲ. ಆದರೂ ಆರೋಪಿ ಬಾಲಕನ ತಂದೆಯ ಹೆಸರು ಹೇಳಿ ಪರಿಚಿತನಂತೆ ವರ್ತಿಸಿ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದ.


Ad Widget

Ad Widget

Ad Widget

ಬಳಿಕ ಬೈಕ್ ನ್ನು ಈಶ್ವರಮಂಗಲ ಕಡೆಗೆ ಚಲಾಯಿಸಿ, ಬಲವಂತವಾಗಿ ಕಾವು ಸಮೀಪದ ಸೇತುವೆ ಬಳಿಯ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಬಾಲಕನ ತಂದೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸ್ ನಿರೀಕ್ಷಿಕರಾದ ಉಮೇಶ್ ಉಪ್ಪಳಿಕೆ ಮಾರ್ಗದರ್ಶನದಲ್ಲಿ, ಪೊಲೀಸ್ ಉಪನಿರೀಕ್ಷಕ ಉದಯ ರವಿ ಹಾಗೂ ಸಿಬ್ಬಂದಿಗಳಾದ ಅದ್ರಂ, ಪ್ರವೀಣ್ ರೈ ನೇತೃತ್ವದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: