ಪೊಲೀಸರನ್ನೇ ಕಳ್ಳರೆಂದು ಥಳಿಸಿದ ಗ್ರಾಮಸ್ಥರು

ಗಾಂಜಾ ಕಳ್ಳಸಾಗಣಿಕೆ ಮೇಲೆ ದಾಳಿ ನಡೆಸಲು ಬಂದಿದ್ದ ಪೊಲೀಸರನ್ನೇ ಕಳ್ಳರೆಂದು ಭಾವಿಸಿ ಗ್ರಾಮಸ್ಥರು ಥಳಿಸಿರುವ ಘಟನೆ ಒಡಿಶಾದ ಕೊರಾಪುಟ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಮೇ 14ರ ಶನಿವಾರದಂದು ಕೋರಾಪಟ್ ಜಿಲ್ಲೆಯ ಬುಡಕಟ್ಟು ಪ್ರದೇಶದ ಮಚ್ಚುಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮತಿಖಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸ್ ತಂಡವನ್ನು ಕಳ್ಳರೆಂದು ಭಾವಿಸಿ ಗ್ರಾಮಸ್ಥರ ಗುಂಪು ಹಲ್ಲೆ ನಡೆಸಿದೆ. ಆದರೆ ವಾಸ್ತವ ಹೇಳಬೇಕೆಂದರೆ ಗಾಂಜಾ ಕಳ್ಳಸಾಗಣಿಕೆ ಮೇಲೆ ದಾಳಿ ನಡೆಸಲು ಅಧಿಕಾರಿಗಳು ಅಲ್ಲಿಗೆ ಹೋಗಿದ್ದರು.

ಸ್ಥಳೀಯರಿಂದ ಈ ಪ್ರದೇಶದಲ್ಲಿ ಗಾಂಜಾ ಕಳ್ಳಸಾಗಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ನೆರೆಯ ಮಲ್ಕಗಿರಿ ಜಿಲ್ಲೆಯ ಸುಮಾರು 30 ಪೊಲೀಸರು ಮಟಿಕಲ್ ಗ್ರಾಮದಲ್ಲಿ ದಾಳಿ ನಡೆಸಲು ಬಂದಿದ್ದರು.

ಆದರೆ, ಪೊಲೀಸರನ್ನೇ ದರೋಡೆಕೋರರೆಂದು ಭಾವಿಸಿ ಗ್ರಾಮಸ್ಥರು ಲಾಠಿ ಹಾಗೂ ಹರಿತವಾದ ಆಯುಧಗಳಿಂದ ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಹಲವಾರು ಪೊಲೀಸರು ಗಾಯಗೊಂಡಿದ್ದು, ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆ ಮತ್ತು ಓರ್ವ ಪೊಲೀಸರನ್ನು ಗ್ರಾಮಸ್ಥರು ಸೆರೆಹಿಡಿದಿದ್ದಾರೆ.

Leave A Reply

Your email address will not be published.