ಅಪ್ರಾಪ್ತ ಬಾಲಕರಿಗೆ ತುಟಿ ಚುಂಬಿಸುವುದು, ಮುದ್ದಾಡುವುದು ಅಪರಾಧವಲ್ಲ | ಹೈಕೋರ್ಟ್ ನಿಂದ ಮಹತ್ವದ ತೀರ್ಪು

ತುಟಿಗಳಿಗೆ ಮುತ್ತು ಕೊಡುವುದು ಮತ್ತು ಮುದ್ದಾಡುವುದು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 377ರ ಅಡಿ ಅಸ್ವಾಭಾವಿಕ ಅಪರಾಧವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಾಗಾಗಿ ಅಪ್ರಾಪ್ತ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ವ್ಯಕ್ತಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

14 ವರ್ಷದ ಬಾಲಕನ ತಂದೆ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಕಳೆದ ವರ್ಷ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಗೆ ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ತಮ್ಮ ಆದೇಶದಲ್ಲಿ ಜಾಮೀನು ನೀಡಿದ್ದಾರೆ.

ಘಟನೆ ವಿವರ : ಹುಡುಗನ ತಂದೆ ಕಪಾಟಿನಲ್ಲಿರಿಸಿದ್ದ ಸ್ವಲ್ಪ ಹಣ ಕಾಣೆಯಾಗಿತ್ತು. ಈ ಬಗ್ಗೆ ಮಗನಲ್ಲಿ ವಿಚಾರಿಸಿದಾಗ, ಬಾಲಕ ತಾನು ‘ಓಲಾ ಪಾರ್ಟಿ’ ಎಂಬ ಆನ್‌ಲೈನ್ ಗೇಮ್ ಅನ್ನು ಆಟ ಆಡಲು ರೀಚಾರ್ಜ್ ಮಾಡಲು ಮುಂಬೈನ ಅಂಗಡಿಗೆ ದಿನಾ ಭೇಟಿ ನೀಡುತ್ತಿದ್ದೆ. ಉಪನಗರದಲ್ಲಿರುವ ಆರೋಪಿಯ ಅಂಗಡಿಗೆ ತಾನು ಭೇಟಿ ನೀಡುತ್ತಿದ್ದೆ. ಅಲ್ಲಿ ಆನ್ಲೈನ್ ಗೇಮ್ ಆಡಲು ದುಡ್ಡನ್ನು ಆರೋಪಿಗೆ ಕೊಡುತ್ತಿದ್ದೆ. ಒಂದು ದಿನ, ಗೇಮ್ ಆಡಲು ಹೋದಾಗ ಆರೋಪಿಗಳು ಅವನ ತುಟಿಗಳಿಗೆ ಮುತ್ತಿಟ್ಟರು ಮತ್ತು ಅವರ ಖಾಸಗಿ ಭಾಗಗಳನ್ನು ಮುಟ್ಟಿದರು ಎಂದು ಹುಡುಗ ಆರೋಪಿಸಿದ್ದಾನೆ.

ಪರಿಣಾಮ ಪೊಲೀಸರನ್ನು ಸಂಪರ್ಕಿಸಿದ ಬಾಲಕನ ತಂದೆ, ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ (ಪೋಕ್ಸೋ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 377 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

Leave A Reply

Your email address will not be published.