ಕರಾವಳಿಯ ಯುವ ಕಲಾವಿದನ ಚಿತ್ರ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರ !!

ಪುತ್ತೂರು: ನಿಯಾಸ್ ಅಲಿ ಬಿ ಎಮ್ ಎಂಬ ವಿದ್ಯಾರ್ಥಿಯೊರ್ವ ರಚಿಸಿದ ದಿಲ್ಲಿ ತಂಡದ ರಿಶಬ್ ಪಂತ್ ಅವರ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಸ್ಟಾರ್‌ ಸ್ಪೋರ್ಟ್ ಹಿಂದಿ ಹಾಗೂ ಕನ್ನಡದ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿದೆ.

ನಿಯಾಸ್ ಪುತ್ತೂರು ತಾಲೂಕಿನ ಈಶ್ವರ ಮಂಗಲ ಸಮೀಪದ ಕರ್ನೂರು ನಬೀಸ ಹಾಗೂ ಮೊಹಮ್ಮದ್ ಬಿ ಯವರ ಪುತ್ರನಾಗಿದ್ದು, ಪ್ರಸ್ತುತ ಪುತ್ತೂರಿನ ಕಾಲೇಜೊಂದರಲ್ಲಿ ಮೂರನೆ ವರ್ಷದ ಇಂಟಿರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಯಾಗಿದ್ದಾನೆ.

Leave A Reply

Your email address will not be published.