ಮಾರುಕಟ್ಟೆಗೆ ಹೊಸ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಪರಿಚಯಿಸಿದ ಟಾಟಾ ಮೋಟರ್ಸ್ !! | ಈ‌ ಹೊಸ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಟಾಟಾ ಮೋಟಾರ್ಸ್ ಭಾರತದಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇತ್ತೀಚಿಗೆ ಜನರು ಹೆಚ್ಚಾಗಿ ಒಲವು ತೋರುತ್ತಿರುವ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದೆ. ಅಂತೆಯೇ ಇದೀಗ ಜನಪ್ರಿಯ ನೆಕ್ಸಾನ್ ಎಲೆಕ್ಟ್ರಿಕ್ ಇವಿಯ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಹೌದು. ಭಾರತದಲ್ಲಿ ಸಂಚಾರದ ಕ್ಷಿಪ್ರ ವಿದ್ಯುದ್ದೀಕರಣಕ್ಕೆ ಬದ್ಧವಾಗಿರುವ ಟಾಟಾ ಮೋಟರ್ಸ್ ಮೇ 11ರಂದು ವೈಯಕ್ತಿಕ ಸಂಚಾರ ವರ್ಗದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಅತ್ಯುತ್ತಮವಾಗಿ ಮಾರಾಟವಾಗುವ ಇವಿಯ ವಿಸ್ತರಣೆಯಾಗಿ ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆಯನ್ನು ರೂ. 17.74 ಲಕ್ಷ ರೂ. ಆಗಿದ್ದು, ಉನ್ನತ ಮಾದರಿಗೆ 19.24 ಲಕ್ಷ ರೂ. ಪಾವತಿ ಮಾಡಬೇಕು.

ಹೊಸ ನೆಕ್ಸಾನ್ ಇವಿಮ್ಯಾಕ್ಸ್, ಹೈ ವೋಲ್ಟೇಜ್ ಅತ್ಯಾಧುನಿಕ ಜಿಪ್ಟ್ರಾನ್ ತಂತ್ರಜ್ಞಾನದ ಶಕ್ತಿ ಪಡೆದಿದ್ದು, ಎರಡು ಟ್ರಿಮ್ ಆಯ್ಕೆಗಳಲ್ಲಿ ಅಂದರೆ, ಹೊಸ ನೆಕ್ಸಾನ್ ಇವಿಮ್ಯಾಕ್ಸ್ XZ+ ಮತ್ತು ನೆಕ್ಸಾನ್ ಇವಿಮ್ಯಾಕ್ಸ್ XZ+ Lux ಎಂಬ ವೈವಿಧ್ಯಗಳಲ್ಲಿ ಲಭ್ಯವಿರಲಿದೆ.

ಈ ಕಾರು 3 ಕೌತುಕಮಯವಾದ ವರ್ಣಗಳಲ್ಲಿ ಬರುತ್ತದೆ. ಇಂಟೆನ್ಸಿ-ಟೀಲ್(ನೆಕ್ಸಾನ್ ಇವಿಮ್ಯಾಕ್ಸ್ ಮಾಡಲ್‍ಗೆ ವಿಶೇಷವಾದದ್ದು), ಡೇಟೋನಾ ಗ್ರೇ ಮತ್ತು ಪ್ರಿಸ್ಟೀನ್ ವೈಟ್. ಡ್ಯುಯಲ್ ಟೋನ್ ಬಾಡಿ ಕಲರನ್ನು ಸಾಮಾನ್ಯವಾಗಿ ಒದಗಿಸಲಾಗುತ್ತದೆ. ಅದಲ್ಲದೆ ಇವುಗಳನ್ನು ನಾಲ್ಕು ಟ್ರಿಮ್‌ಗಳಾಗಿ ವಿಂಗಡಿಸಲಾಗಿದೆ. ಕಂಪನಿಯು ZX Plus 3.3 kW-hr ಚಾರ್ಜರ್, ZX Plus 7.2 kW-hr AC ಫಾಸ್ಟ್ ಚಾರ್ಜರ್, ZX Plus LUX 3.3 kW-hr ಚಾರ್ಜರ್ ಮತ್ತು ZX Plus LUX 7.2 kW-Hour AC ಫಾಸ್ಟ್ ಚಾರ್ಜರ್‌ನಲ್ಲಿ ಹೊಸ ಇವಿ ಅನ್ನು ಬಿಡುಗಡೆ ಮಾಡಿದೆ.

ಹಿಂದಿನ ಮಾದರಿಗೆ ಹೋಲಿಸಿದರೆ, ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನೊಂದಿಗೆ 30% ಹೆಚ್ಚು ಶಕ್ತಿಶಾಲಿ ಬ್ಯಾಟರಿಯನ್ನು ನೀಡಲಾಗಿದೆ. ಹೊಸ ಎಲೆಕ್ಟ್ರಿಕ್ ಇವಿ 40.5 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತಿದ್ದು, ಅದು ಕಾರಿಗೆ ದೀರ್ಘ ಶ್ರೇಣಿಯನ್ನು ನೀಡುತ್ತದೆ. ನೆಕ್ಸಾನ್ ಇವಿ ಮ್ಯಾಕ್ಸ್‌ನ ದೊಡ್ಡ ಗಾತ್ರದ ಬ್ಯಾಟರಿ ಪ್ಯಾಕ್, ಅದರ ಬೂಟ್ ಸ್ಪೇಸ್‌ಗೆ ಯಾವುದೇ ವ್ಯತ್ಯಾಸ ತಂದಿಲ್ಲ ಎಂದು ಕಂಪನಿ ಮಾಹಿತಿ ನೀಡಿದೆ.

ಚಾರ್ಜಿಂಗ್ ಮಟ್ಟದ ಕುರಿತು ಹೇಳುವುದಾದರೆ, ನೆಕ್ಸಾನ್ ಇವಿಮ್ಯಾಕ್ಸ್, 3.3 ಕಿ.ವ್ಯಾ ಚಾರ್ಜರ್ ಅಥವಾ ಶೀಘ್ರ ಚಾರ್ಜಿಂಗ್‍ಗಾಗಿ 7.2 ಕಿ.ವ್ಯಾ ಚಾರ್ಜರ್ ನ ಆಯ್ಕೆ ಗ್ರಾಹಕರಿಗೆ ಇರಲಿದೆ. 7.2 ಕಿ.ವ್ಯಾ ಫಾಸ್ಟ್ ಚಾರ್ಜರ್ ಅನ್ನು ಮನೆಯಲ್ಲಿ ಅಥವಾ ಕಾರ್ಯಸ್ಥಳದಲ್ಲಿ ಅಳವಡಿಸಬಹುದಾಗಿದ್ದು, ಇದು ಚಾರ್ಜಿಂಗ್ ಸಮಯವನ್ನು 6.5 ಗಂಟೆಗಳಿಗೆ ಕಡಿಮೆಗೊಳಿಸಲು ಸಹಾಯವಾಗುತ್ತದೆ. ನೆಕ್ಸಾನ್ ಇವಿಮ್ಯಾಕ್ಸ್, ಯಾವುದೇ 50 ಕಿ.ವ್ಯಾ ಡಿಸಿ ಫಾಸ್ಟ್ ಚಾರ್ಜರ್ ನಿಂದ ಕೇವಲ 56 ನಿಮಿಷಗಳಲ್ಲಿ 0-80% ಶೀಘ್ರ ಚಾರ್ಜಿಂಗ್ ಸಮಯಕ್ಕೆ ಬೆಂಬಲ ಒದಗಿಸಲಿದೆ ಎನ್ನಲಾಗಿದೆ.

ನೆಕ್ಸಾನ್ ಇವಿ ಮ್ಯಾಕ್ಸ್‌ನ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಅದರ ಶ್ರೇಣಿ. ARAI ಪ್ರಕಾರ, ಹೊಸ ಇವಿ ಅನ್ನು ಒಂದೇ ಚಾರ್ಜ್‌ನಲ್ಲಿ 437 ಕಿ.ಮೀ ವರೆಗೆ ಓಡಿಸಬಹುದಾಗಿದೆ. ಹೊಸ ಇವಿ ಮ್ಯಾಕ್ಸ್‌ನ ಕ್ಯಾಬಿನ್‌ನಲ್ಲಿ, ಕಂಪನಿಯು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಏರ್ ಪ್ಯೂರಿಫೈಯರ್, ಹಾರ್ಮನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮೋಡ್‌ಗಳಿಗಾಗಿ ಕೆತ್ತಲಾದ ಡಯಲ್ ನಾಬ್, ವೈರ್‌ಲೆಸ್ ಫೋನ್ ಚಾರ್ಜರ್ ನಂತಹ ಅನೇಕ ವೈಶಿಷ್ಟ್ಯಗಳನ್ನು ನೀಡಿದೆ. ಕಂಪನಿಯು ನೆಕ್ಸಾನ್ ಇವಿ ಮ್ಯಾಕ್ಸ್‌ನೊಂದಿಗೆ ಹೊಸ ಬಣ್ಣದ ಸ್ಕೀಮ್ ಅನ್ನು ನೀಡಿದೆ. ಇದು ಇಂಟೆನ್ಸಿಟಿ-ಟೀಲ್ ಆಗಿದ್ದು, ಇದರ ಹೊರತಾಗಿ ಕಾರನ್ನು ಡೇಟೋನಾ ಗ್ರೇ ಮತ್ತು ಪ್ರಿಸ್ಟಿನ್ ವೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

ನೆಕ್ಸಾನ್ ಇವಿ ಮ್ಯಾಕ್ಸ್ 3 ಚಾಲನಾ ಮೋಡ್‍ಗಳನ್ನು ಹೊಂದಿದೆ. ಎಕೋ, ಸಿಟಿ ಮತ್ತು ಸ್ಪೋರ್ಟ್ಸ್ ಹಾಗೂ ನವೀಕೃತ ಜೆಡ್-ಕನೆಕ್ಟ್ 2.0 ಸಂಪರ್ಕಗೊಂಡ ಕಾರ್ ತಂತ್ರಜ್ಞಾನದಲ್ಲಿ ಎಂಟು ಹೊಸ ಅಂಶಗಳನ್ನು ಹೊಂದಿದೆ. ಜೆಡ್-ಕನೆಕ್ಟ್ ಆ್ಯಪ್, 48 ಸಂಪರ್ಕಗೊಂಡ ಕಾರ್ ಅಂಶಗಳನ್ನು ಒದಗಿಸುವ ಆ್ಯಪ್ ಆಗಿದೆ. ಇದು ಆಳವಾದ ಡ್ರೈವ್ ಅನಲಿಟಿಕ್ಸ್ ಮತ್ತು ಡಯಾಗ್ನೋಸ್ಟಿಕ್ಸ್ ಗೆ ನೆರವಾಗುತ್ತದೆ. ಈ ಹೆಚ್ಚುವರಿಯಾಗಿ ಸೇರಿಸಲ್ಪಟ್ಟಿರುವ ಅಂಶದ ಪಟ್ಟಿಯು ಸ್ಮಾರ್ಟ್ ವಾಚ್ ಸಂಯೋಜನೆ, ಆಟೋ/ಮ್ಯಾನ್ಯುವಲ್ ಡಿಟಿಸಿ ಚೆಕ್, ಚಾರ್ಜಿಂಗ್‍ಗೆ ಪರಿಮಿತಿ ಸೆಟ್ ಮಾಡುವುದು, ಮಾಸಿಕ ವರದಿ ಮತ್ತು ವರ್ಧಿತ ಡ್ರೈವ್ ಅನಲಿಟಿಕ್ಸ್ ಅನ್ನು ಒಳಗೊಂಡಿದೆ.

Leave A Reply

Your email address will not be published.