ಪ್ರೇಮಿಗಳ‌ ಸೌಧ ‘ತಾಜ್ ಮಹಲ್’ನಲ್ಲಿ ಹಿಂದೂ ವಿಗ್ರಹಗಳಿಲ್ಲ! ಭಾರತೀಯ ಪ್ರಾಚ್ಯವಸ್ತು ಇಲಾಖೆ ಸ್ಪಷ್ಟನೆ

ತಾಜ್ ಮಹಲ್ ನ ಮುಚ್ಚಿದ 22 ಕೋಣೆಗಳ ಬಾಗಿಲನ್ನು ತೆಗೆಯಬೇಕು ಎಂದು ಹಾಕಿದ್ದ ಅರ್ಜಿಯನ್ನು ಇತ್ತೀಚೆಗಷ್ಟೇ ಅಲಹಬಾದ್ ಉಚ್ಚನ್ಯಾಯಾಲಯ ತಿರಸ್ಕರಿಸಿತ್ತು.

ತಾಜ್ ಮಹಲ್ ಮೂಲತಃ ಶಿವನ ದೇವಸ್ಥಾನ ಎಂಬ ವಾದವೊಂದು ಬಹಳ‌ ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲೇ ಈ ನ್ಯಾಯಾಲಯ ಈ ತೀರ್ಪು ನೀಡಿದೆ.


Ad Widget

Ad Widget

Ad Widget

ಇದರ ಬೆನ್ನಲ್ಲೇ ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ತಾಜ್ ಮಹಲ್‌ನೊಳಗಿನ ಮುಚ್ಚಿದ 22 ಕೋಣೆಗಳೊಳಗೆ ಹಿಂದೂ ದೇವರ ವಿಗ್ರಹಗಳಿಲ್ಲ. ಹಾಗೆಯೇ ಆ ಕೋಣೆಗಳನ್ನು ಶಾಶ್ವತವಾಗಿ ಮುಚ್ಚಿಲ್ಲ. ಕಾಲಕಾಲಕ್ಕೆ ತೆಗೆದು ಕಟ್ಟಡದ ಸಂರಕ್ಷಣೆಗೆ ಅಗತ್ಯವಾದ ಕಾರ್ಯಗಳನ್ನು ಕೈಗೊಂಡು ಬರಲಾಗಿದೆ ಎಂದು ಹೇಳಿದ್ದಾರೆ.

ತಾಜ್ ಮಹಲ್ ಮೂಲತಃ ಶಿವನ ದೇವಸ್ಥಾನ ಎಂಬ ವಾದವನ್ನೂ ಎಎಸ್‌ಐ ಮೂಲಗಳು ಅಲ್ಲಗಳೆದಿವೆ. ತಾಜ್ ಮಹಲ್‌ನ ನೆಲಮಾಳಿಗೆಯಲ್ಲಿ ಒಟ್ಟು 100 ಸಾರ್ವಜನಿಕ ಕೋಣೆಗಳಿವೆ. ಇವುಗಳೆಲ್ಲ ವಿವಿಧ ವಿನ್ಯಾಸಗಳನ್ನು ಹೊಂದಿವೆ. ಅವುಗಳನ್ನು ಭದ್ರತಾ ಕಾರಣಗಳಿಗಾಗಿ ಮುಚ್ಚಲಾಗಿದೆ. ಜನರು ಅಲ್ಲೆಲ್ಲ ಪ್ರವೇಶಿಸಿ ಹಾಳು ಮಾಡಬಾರದೆನ್ನುವುದೇ ಇದರ ಹಿಂದಿನ ಕಾಳಜಿ ಎಂದು ಅಧಿಕಾರಿ ಹೇಳಿದ್ದಾರೆ.

ಎಎಸ್‌ಐನ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮೊಹಮ್ಮದ್ ಈ ಬಗ್ಗೆ ಪ್ರತಿ ಕ್ರಿಯಿಸಿ, ತಾನು ಅಲ್ಲಿ ಉಸ್ತುವಾರಿಯಾಗಿದ್ದಾಗ ಆ ಕೊಠಡಿಗಳಲ್ಲಿ ಯಾವುದೇ ಧಾರ್ಮಿಕ ಸಂಕೇತಗಳನ್ನು ಕಂಡಿಲ್ಲ ಎಂದಿದ್ದಾರೆ.

Leave a Reply

error: Content is protected !!
Scroll to Top
%d bloggers like this: