ಈ ಚಿತ್ರದಲ್ಲಿ ನೀವು ಯಾವುದನ್ನು ಮೊದಲು ನೋಡುತ್ತೀರಿ ಎಂಬುದರ ಮೇಲೆ ನಿಮ್ಮ ‘ಗುಣ’ ಅವಲಂಬಿತ – ಆಪ್ಟಿಕಲ್ ಭ್ರಮೆ..!

ಇತ್ತೀಚೆಗೆ ಆಪ್ಟಿಕಲ್ ಭ್ರಮೆಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ. ಇದು ಜನರ ಮೆದುಳಿಗೆ ಕೆಲಸ ಕೊಡುತ್ತಿದ್ದು, ನೆಟ್ಟಿಗರು ಕೂಡ ಇದರತ್ತ ಹೆಚ್ಚಿನ ಚಿತ್ತ ನೆಟ್ಟಿದ್ದಾರೆ. ಇದೀಗ ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ನಲ್ಲಿ ನೀವು ಮೊದಲು ನೋಡುವ ಚಿತ್ರವು, ನೀವು ಯಾವ ರೀತಿಯ ವ್ಯಕ್ತಿ ಎಂಬುದನ್ನು ನಿರ್ಧರಿಸುತ್ತದೆ.

ಓಲೆಗ್ ಶುಫಿಯಾಕ್ ಅವರ ಹೊಸ ಆಪ್ಟಿಕಲ್ ಇಲ್ಯೂಷನ್ ಚಿತ್ರವು ವಿಷನ್ ಇನ್ ದಿ ಮೌಂಟೇನ್ಸ್ ಪರ್ವತ ಚಿತ್ರಕಲೆಯಾಗಿದೆ. ಇದು ಅನೇಕ ಗುಪ್ತ ಮುಖಗಳನ್ನು ಹೊಂದಿದೆ. ಪ್ರತಿಯೊಂದಕ್ಕೂ ತನ್ನದೇ ಆದ ಅರ್ಥವಿದೆ. ಚಿತ್ರದಲ್ಲಿ ಗಡ್ಡಧಾರಿ, ಮುಸುಕುಧಾರಿ, ಮೊನಾಲಿಸಾ ಮುಖ ಮತ್ತು ಇನ್ನೂ ಅನೇಕ ಮುಖಗಳು ಪೇಂಟಿಂಗ್‌ನಲ್ಲಿವೆ.

ನೀವು ಮೊದಲು ನೋಡುವ ಮುಖವು ನೀವು ಯಾವ ರೀತಿಯ ವ್ಯಕ್ತಿಯೆಂದು ವ್ಯಾಖ್ಯಾನಿಸುತ್ತದೆ. ಈ
ಚಿತ್ರವು ಹಲವಾರು ಮುಖಗಳನ್ನು ಹೊಂದಿದೆ.

ನೀವು ಗಡ್ಡವಿರುವ ವ್ಯಕ್ತಿಯನ್ನು ಮೊದಲು ನೋಡಿದ್ದರೆ, ಇಂಥವರು ಕಡಿಮೆ ಸ್ವಾಭಿಮಾನವನ್ನು ಹೊಂದಿರುತ್ತಾರೆ. ಇದು ಅವರ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂಬರ್ಥವನ್ನು ಹೊಂದಿದೆ.

ಮುಸುಕುಧಾರಿಗಳನ್ನು ಮೊದಲು ನೋಡಿದರೆ, ನಿಮಗೆ ಕಡಿಮೆ ಕೋಪ ಎಂದು ಹೇಳುತ್ತದೆ. ಹಾಗೂ ತುಂಬಾ ತಾಳ್ಮೆಯ ವ್ಯಕ್ತಿತ್ವ ಎಂದರ್ಥ.

ಮೊನಾಲಿಸಾ ಅವರ ಮುಖವನ್ನು ಮೊದಲು ನೋಡುವವರು ತಮ್ಮ ಜೀವನದ ಪ್ರಣಯ ಮನೋಭಾವವನ್ನು ಹೊಂದಿದ್ದಾರೆ. ವಿಭಿನ್ನ ಜನರೊಂದಿಗೆ ಅದ್ಭುತ ಸಂಬಂಧವನ್ನು ಹೊಂದಿರುತ್ತಾರೆ. ನೀವು ತುಂಬಾ ಸುಂದರವಾಗಿ ಕಾಣಲು ಇಷ್ಟಪಡುತ್ತೀರಿ ಎಂದರ್ಥ.

ಇತರ ಮುಖಗಳಿಗಿಂತ ಮೊದಲು ಜಾಕೆಟ್‌ನಲ್ಲಿ ಕುಳಿತಿರುವ ವ್ಯಕ್ತಿಯನ್ನು ನೀವು ನೋಡಿದರೆ, ನಿಮಗೆ ಸಂಘರ್ಷದ ಭಯವಿದೆ ಎಂದು ಅರ್ಥೈಸಬಹುದು. ನಿಮ್ಮ ನಕಾರಾತ್ಮಕ ಭಾವನೆಗಳನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಹುದು ಎಂದರ್ಥ.

ಬಂಡೆಯ ಮೇಲೆ ಕುಳಿತ ವ್ಯಕ್ತಿಯನ್ನು ಮೊದಲು ನೋಡಿದರೆ, ನೀವು ನಿಮ್ಮನ್ನು ಪ್ರತ್ಯೇಕಿಸುವ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿ ಎಂದು ಅರ್ಥ. ನಿಮಗೆ ಏಕಾಂಗಿಯಾಗಿ ಸಮಯ ಕಳೆಯುವುದು ಮುಖ್ಯ. ಆದರೆ, ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಉತ್ತಮ ಎಂದು ಅರ್ಥ.

Leave A Reply

Your email address will not be published.