ಕರ್ನಾಟಕದಲ್ಲಿ ಮೇ ಅಂತ್ಯಕ್ಕೇ ಮುಂಗಾರು ಪ್ರವೇಶ | ಹವಾಮಾನ ಇಲಾಖೆ ಮುನ್ಸೂಚನೆ- ಹೆಚ್ಚಿನ ಮಾಹಿತಿ ಇಲ್ಲಿದೆ

ನವದೆಹಲಿ:ಮೊದಲ ಮಾನ್ಸೂನ್ ಆಗಮನದ ನಿಗದಿತ ದಿನಾಂಕವನ್ನು ಹವಾಮಾನ ಇಲಾಖೆ ಘೋಷಿಸಿದ್ದು, ಕೇರಳ ಸೇರಿದಂತೆ ಕರ್ನಾಟಕದಲ್ಲಿ ಮಾನ್ಸೂನ್ ಬರುವಿಕೆಯ ಕುರಿತು ಮಾಹಿತಿ ನೀಡಿದೆ.

ಮೇ 27 ರಂದು ಕೇರಳದ ಮೇಲೆ ನೈಋತ್ಯ ಮಾನ್ಸೂನ್ ಪ್ರಾರಂಭವಾಗುವ ನಿರೀಕ್ಷೆಯಿದ್ದು , ಜೂನ್ 1 ಕ್ಕಿಂತ ಸುಮಾರು ನಾಲ್ಕು ದಿನಗಳ ಮುಂಚಿತವಾಗಿ ಬರಲಿದೆ.ಭಾರತೀಯ ಹವಾಮಾನ ಇಲಾಖೆ ನಿರ್ವಹಿಸುವ ಆರಂಭದ ದಿನಾಂಕಗಳ ಮಾಹಿತಿಯ ಪ್ರಕಾರ, 2010 ರ ನಂತರ ಮೊದಲ ಬಾರಿಗೆ ಮಾನ್ಸೂನ್ ಮೇ 27 ರಂದು ದಕ್ಷಿಣ ರಾಜ್ಯಕ್ಕೆ ಆಗಮಿಸುತ್ತದೆ . ಮಾರುತಗಳು ಪ್ರಬಲವಾದರೆ ಆ ದಿನವೇ ಕರ್ನಾಟಕದ ಕರಾವಳಿಗೆ ಮುಂಗಾರು ಬರಲಿದೆ.ಇಲ್ಲದಿದ್ದರೆ ಒಂದೆರಡು ದಿನ ತಡವಾಗಬಹುದು ಎಂದು ತಿಳಿಸಿದೆ.

ಶುಕ್ರವಾರ ಬಿಡುಗಡೆಯಾದ ಮಾನ್ಸೂನ್ ಆರಂಭದ ಬುಲೆಟಿನ್‌ನಲ್ಲಿ, ಐಎಂಡಿ, ‘ಈ ವರ್ಷ, ನೈಋತ್ಯ ಮಾನ್ಸೂನ್‌ನ ಪ್ರಾರಂಭವು ಸಾಮಾನ್ಯ ಆರಂಭದ ದಿನಾಂಕಕ್ಕಿಂತ ಮುಂಚಿತವಾಗಿ ಆಗುವ ಸಾಧ್ಯತೆಯಿದೆ. ಮೇ 27 ರಂದು ಕೇರಳದ ಮೇಲೆ ಮುಂಗಾರು ಪ್ರಾರಂಭವಾಗುವ ಸಾಧ್ಯತೆಯಿದೆ, ಎರಡೂ ಕಡೆ ನಾಲ್ಕು ದಿನಗಳ ವ್ಯತ್ಯಾಸವಿದೆ.

ಇದೀಗ ಬಂದ ಮಾಹಿತಿಯ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ತೇವಾಂಶ ಭರಿತ ಮೋಡಗಳ ಪರಿಣಾಮ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮೇ 18ರಿಂದ ಇನ್ನಷ್ಟು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಮೇ,18,19ರಂದು ಇನ್ನಷ್ಟು ಹೆಚ್ಚು ಮಳೆ ಬೀಳಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

Leave A Reply