ಇಲ್ಲಿದೆ ಸಮುದ್ರದಲ್ಲಿ ತೇಲಿ ಬಂದ ಬಂಗಾರ ರಥದ ರಹಸ್ಯ

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಾಪಲ್ಲಿಯ ಕಡಲ ದಡದಲ್ಲಿ ಹೀಗೆ ತೇಲಿ ಬಂದಿತ್ತು ಬಂಗಾರದ ರಥ. ರಥದ ಬಗ್ಗೆ ಈಗ ನಾನಾ ಕಥೆಗಳು ಹುಟ್ಟಿಕೊಂಡಿವೆ. ಈ ರಥ ಬಂದಿದ್ದೆಲ್ಲಿಂದ? ಇಲ್ಲಿಗೇಕೆ ಬಂತು ? ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು.

ರಥವನ್ನ ಖಾಲಿ ಡ್ರಮ್ಮ್‌ಗಳನ್ನ ಸೇರಿಸಿ ತೆಪ್ಪದ ರೀತಿ ಮಾಡಿ, ಅದರ ಮೇಲೆ ರಥವನ್ನ ತೇಲುವಂತೆ ಮಾಡಲಾಗಿದೆ. ಇನ್ನೂ ಈ ರಥದ ಕಂಬಿಗಳ ಮೇಲೆ 16-01-2022 ಅಂತ ಬರೆದಿರುವುದನ್ನ ಸಹ ಕಾಣಬಹುದಾಗಿದೆ. ಇದೆಲ್ಲವನ್ನ ಗಮನಿಸಿದ್ರೆ, ಯಾರೋ ಇದನ್ನ ಉದ್ದೇಶ ಪೂರಕವಾಗಿಯೇ ಮಾಡಿದ್ದಿರಬಹುದೇನೋ ಎಂದು ಅನಿಸುತ್ತೆ.

ಇದು ಸ್ಟೀಲ್ ಲೋಹದ ರಥವಾಗಿದ್ದು, ಇದಕ್ಕೆ ಗೋಲ್ಡ್ ಕಲರ್‌ನ್ನ ಹಚ್ಚಲಾಗಿದೆ, ಅಂತ ಶ್ರೀಕಾಕುಳಂ ಜಿಲ್ಲೆ ತೆಕ್ಕಲಿಯ ಇನ್ಸ್ ಪೆಕ್ಟರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಬಹುಶಃ ಥೈಲ್ಯಾಂಡ್ ಅಥವಾ ಮಯನ್ಮಾರ್‌ನಿಂದ ತೇಲಿ ಬಂದಿರೋ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

Leave A Reply

Your email address will not be published.