ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗ್ರಾಹಕರೇ ಗಮನಿಸಿ !! | ವಹಿವಾಟಿನ ನಿಯಮಗಳಲ್ಲಿ ಭಾರೀ ಬದಲಾವಣೆ, ಮೇ 26 ರಿಂದಲೇ ಹೊಸ ನಿಯಮ ಜಾರಿಗೆ

ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ ಇದೆ. ಸರ್ಕಾರ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ವಹಿವಾಟುಗಳ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಹೊಸ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಯಾವುದೇ ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ, ಪಾನ್ ಮತ್ತು ಆಧಾರ್ ನೀಡುವುದು ಕಡ್ಡಾಯವಾಗಿರಲಿದೆ.

ಆದಾಯ ತೆರಿಗೆ (15ನೇ ತಿದ್ದುಪಡಿ) ನಿಯಮ, 2022ರ ಅಡಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೆಸ್ (ಸಿಬಿಡಿಟಿ) ಈ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ಹೊಸ ನಿಯಮಗಳು ಮೇ 26, 2022 ರಿಂದಲೇ ಜಾರಿಗೆ ಬರಲಿವೆ. ಆದರೆ, ಈ ನಿಯಮವನ್ನು ಈಗಾಗಲೇ ನೋಟಿಫೈ ಮಾಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಈ ವಹಿವಾಟುಗಳಿಗೆ ಪಾನ್-ಆಧಾರ್ ಅನಿವಾರ್ಯ

*ಹೊಸ ನಿಯಮದ ಪ್ರಕಾರ, ಯಾವುದೇ ಓರ್ವ ವ್ಯಕ್ತಿ ಬ್ಯಾಂಕಿಂಗ್ ಕಂಪನಿ ಅಥವಾ ಕಾರ್ಪೊರೇಟಿವ್ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಒಂದು ಹಣಕಾಸು ವರ್ಷದಲ್ಲಿ, ಒಂದು ಅಥವಾ ಹೆಚ್ಚಿನ ಖಾತೆಗಳಲ್ಲಿ 20 ಲಕ್ಷ ರೂಪಾಯಿ ಹಣವನ್ನು ಠೇವಣಿ ಮಾಡಿದರೆ, ಅವರು ಪಾನ್-ಆಧಾರ್ ಅನ್ನು ಸಲ್ಲಿಸಬೇಕಾಗಲಿದೆ.

*ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ಕಂಪನಿ ಅಥವಾ ಸಹಕಾರಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿರುವ ಯಾವುದೇ ಒಂದು ಅಥವಾ ಹೆಚ್ಚಿನ ಖಾತೆಗಳಿಂದ ರೂ. 20 ಲಕ್ಷ ಹಿಂಪಡೆಯಲು ಸಹ ಪಾನ್-ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿರಲಿದೆ.

*ನೀವು ಬ್ಯಾಂಕಿಂಗ್ ಕಂಪನಿ, ಸಹಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಚಾಲ್ತಿ ಖಾತೆ ಅಥವಾ ನಗದು ಕ್ರೆಡಿಟ್ ಖಾತೆಯನ್ನು ತೆರೆದರೂ ಪಾನ್-ಆಧಾರ್ ನೀಡುವುದು ಅನಿವಾರ್ಯವಾಗಿರಲಿದೆ.

*ಯಾರಾದರೂ ಚಾಲ್ತಿ ಖಾತೆಯನ್ನು ತೆರೆದರೆ, ಅದಕ್ಕೂ ಪಾನ್ ಕಾರ್ಡ್ ಸಲ್ಲಿಕೆ ಕಡ್ಡಾಯವಾಗಿರಲಿದೆ.

*ಬ್ಯಾಂಕ್ ಖಾತೆಯು ಈಗಾಗಲೇ ಪಾನ್‌ನೊಂದಿಗೆ ಲಿಂಕ್ ಆಗಿದ್ದರೆ, ಅವರು ಹೆಚ್ಚಿನ ವಹಿವಾಟುಗಳಿಗಾಗಿ ಪಾನ್-ಆಧಾರ್ ಅನ್ನು ಲಿಂಕ್ ಮಾಡಬೇಕಾಗಲಿದೆ.

ಹಣಕಾಸಿನ ವಹಿವಾಟಿನ ಮೇಲೆ ಸರ್ಕಾರದ ತೀವ್ರ ನಿಗಾ

ಈ ಹೆಜ್ಜೆಯನ್ನಿಡುವ ಮೂಲಕ ಸರ್ಕಾರ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಟ್ಯಾಕ್ಸ್ ಪರಧಿಗೆ ತರಲು ಯತ್ನಿಸುತ್ತಿದೆ. ದೊಡ್ಡ ಪ್ರಮಾಣದ ಹಣಕಾಸಿನ ವಹಿವಾಟು ನಡೆಸುವ ಕೆಲವರ ಬಳಿ ಪಾನ್ ಕಾರ್ಡ್ ಕೂಡ ಇಲ್ಲ ಹಾಗೂ ಅವರು ಐಟಿಆರ್ ಕೂಡ ಸಲ್ಲಿಸುವುದಿಲ್ಲ. ಹೀಗಿರುವಾಗ ಇಂತಹ ವಹಿವಾಟುಗಳ ಸಂದರ್ಭದಲ್ಲಿ ಈ ಹೊಸ ನಿಯಮದ ಮೂಲಕ ಆದಾಯ ತೆರಿಗೆ ಇಲಾಖೆ ಸುಲಭವಾಗಿ ವಹಿವಾಟುಗಳನ್ನು ಗುರುತಿಸಬಹುದಾಗಿದೆ.

Leave A Reply

Your email address will not be published.