ವರ್ಷದೊಳಗೆ ಮೊಮ್ಮಗು ನೀಡಿ, ಇಲ್ಲ 5 ಕೋಟಿ ಪರಿಹಾರ ಕೊಡಿ-ಮಗ,ಸೊಸೆ ವಿರುದ್ದ ಮೊಕದ್ದಮೆ ಹೂಡಿದ ಮಹಿಳೆ

ಮಗ ಮತ್ತು ಸೊಸೆ ಮೊಮ್ಮಗುವನ್ನು ನೀಡಲು ನಿರಾಕರಿಸಿದ್ದರಿಂದ ತಾನು ಮಾನಸಿಕ ಸಂಕಟವನ್ನು ಅನುಭವಿಸುತ್ತಿದ್ದು, ಇದಕ್ಕೆ ಪರಿಹಾರ ನೀಡುವಂತೆ ಮಹಿಳೆಯೊಬ್ಬಳು ಇದೇ ಮೊದಲ ಬಾರಿಗೆ ಹರಿದ್ವಾರದ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸದ್ಯ ಈ ವಿಚಾರವಾಗಿ ಮಗ ಮತ್ತು ಸೊಸೆ ವಿರುದ್ಧ 5 ಕೋಟಿ ರೂ.ಗಳ ಮೊಕದ್ದಮೆ ಹೂಡಿ, ವಕೀಲ ಎ.ಕೆ.ಶ್ರೀವಾಸ್ತವ್ ಮೂಲಕ ಮಹಿಳೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ತನ್ನ ಮಗನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಹಣ ಖರ್ಚು ಮಾಡಿ ಉತ್ತಮ ಪೈಲಟ್ ಮಾಡಿದ್ದೇನೆ.

2016ರಲ್ಲಿ ಭಾರೀ ಖರ್ಚು ಮಾಡಿ ತನ್ನ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದೇನೆ. ಅಲ್ಲದೇ ನವದಂಪತಿಯನ್ನು ಹನಿಮೂನ್‌ಗೆ ನನ್ನ ಸ್ವಂತ ಹಣದಿಂದ ಥೈಲ್ಯಾಂಡ್‌ಗೆ ಕಳುಹಿಸಿದ್ದೇನೆ ಎಂದು ಮಹಿಳೆ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ.


Ad Widget

Ad Widget

Ad Widget

ಮದುವೆಯ ನಂತರ ನನ್ನ ಸೊಸೆ ಮಗನನ್ನು ಹೈದರಾಬಾದ್‌ಗೆ ಶಿಫ್ಟ್ ಆಗು ಎಂದು ಒತ್ತಾಯಿಸಿದಳು. ಅಂದಿನಿಂದ ಮಗ, ಸೊಸೆ ನಮ್ಮೊಂದಿಗೆ ಮಾತನಾಡುತ್ತಿಲ್ಲ. ಅಲ್ಲದೇ ನನ್ನ ಸೊಸೆಯ ಕುಟುಂಬದ ಜವಾಬ್ದಾರಿಯನ್ನು ನನ್ನ ಮಗನ ಸಂಪೂರ್ಣ ಸಂಬಳದಲ್ಲಿ ನಡೆಸಲಾಗುತ್ತಿದೆ. ಪ್ರತಿ ನಿರ್ಧಾರ ತೆಗೆದುಕೊಳ್ಳಬೇಕಾದರೂ ಮಗ ಹೆಂಡತಿಯ ಮಾತನ್ನು ಕೇಳುತ್ತಾನೆ ಮತ್ತು ಆಕೆಯನ್ನೇ ಬೆಂಬಲಿಸುತ್ತಾನೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ. ಒಂದು ವರ್ಷದೊಳಗೆ ಸೊಸೆ ಗರ್ಭಧರಿಸಬೇಕು ಎಂದು ಮಗ ಮತ್ತು ಸೊಸೆಗೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಪೋಷಕರಿಗೆ 5 ಕೋಟಿ ರೂಪಾಯಿ ನೀಡಬೇಕು ಎಂದು ಮೊಕದ್ದಮೆಯಲ್ಲಿ ಮನವಿ ಮಾಡಲಾಗಿದೆ.

Leave a Reply

error: Content is protected !!
Scroll to Top
%d bloggers like this: