ಮುದ್ದಾಡಿ ಬೆಳೆಸಿದ ಮಕ್ಕಳು ಇಳಿ ವಯಸ್ಸಿನಲ್ಲಿ ದೂರವಾದರು!! ಸಕಲೇಶಪುರದಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಮಂಗಳೂರಿನ ವ್ಯಕ್ತಿ!!??

ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ-ಪುತ್ತೂರು ಆಸುಪಾಸಿನವರೆನ್ನಲಾದ ಸುಮಾರು 70 ವರ್ಷದ ವೃದ್ಧರೋರ್ವರು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಳೆದ ಕೆಲ ಸಮಯಗಳಿಂದ ಏಕಾಂಗಿಯಾಗಿ ಭಿಕ್ಷೆ ಬೇಡುತ್ತಾ, ಸ್ಥಳೀಯರು ನೀಡಿದ ಅನ್ನವನ್ನು ತಿನ್ನುತ್ತಾ ಶೋಚನೀಯ ಜೀವನ ಸಾಗಿಸುತ್ತಿರುವ ಬಗ್ಗೆ ವರದಿಯಾಗಿದೆ.

ಕೆಲ ಸಮಯದಿಂದ ವೃದ್ಧನನ್ನು ಕಾಣುತ್ತಿದ್ದ ಸ್ಥಳೀಯರು ಸೇರಿ ಮನವೊಲಿಸಿ ವಿಚಾರಿಸಿದಾಗ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರೆಂದು ಹಾಗೂ ನಾಲ್ಕು ಜನ ಮಕ್ಕಳಿದ್ದು ನಾಲ್ವರು ಕೂಡ ಹುದ್ದೆಯಲ್ಲಿರುವುದರಿಂದ ವೃದ್ಧನ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ತಿಳಿದುಬಂದಿದೆ.


Ad Widget

Ad Widget

Ad Widget

ಬಾಲ್ಯದಲ್ಲಿ ಹಾಡಿ-ಮುದ್ದಾಡಿ ಬೆಳೆಸಿದ ಅಪ್ಪ, ಇಳಿ ವಯಸ್ಸಿನಲ್ಲಿ ಮಕ್ಕಳಿಗೆ ಬೇಡವಾಗಿದ್ದಾರೆ ಎಂದು ಸಕಲೇಶಪುರದ ಜನತೆ ವೃದ್ಧನ ಮಕ್ಕಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಮಕ್ಕಳಿಗಾಗಿ ಹಪಹಪಿಸುತ್ತಿರುವ ವೃದ್ಧನ ಮೂಕ ರೋಧನೆ ಇನ್ನಾದರೂ ಮಕ್ಕಳ ಗಮನಕ್ಕೆ ಬರಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: