ಬೆಕ್ಕಿನ ಮರಿ ಎಂದು ಚಿರತೆ ಮರಿನ ಹೊತ್ತು ತಂದ ಪುಟ್ಟ ಬಾಲಕ| ದಿಗಿಲುಗೊಂಡ ಮನೆ ಮಂದಿ !

ಪುಟ್ಟ ಮಕ್ಕಳು ದೇವರಿಗೆ ಸಮಾನ ಅಂತ ದೊಡ್ಡವರು ಹೇಳುತ್ತಾರೆ. ಅವರಿಗೆ ಈ ನಾಟಕ, ಕಪಟ, ವಂಚನೆ ಯಾವುದೂ ಗೊತ್ತಿರುವುದಿಲ್ಲ. ಅವರ ಲೋಕದಲ್ಲಿ ಅವರು ಇರುತ್ತಾರೆ. ಅವರಷ್ಟು ಮುಗ್ಧ ಮನಸ್ಸಿನವರು ಈ ಜಗತ್ತಿನಲ್ಲಿ ಎಲ್ಲೂ ಇಲ್ಲ. ಅಂತಹ ಮುಗ್ಧತೆಯ ನಿದರ್ಶನವೇ ಈ ಒಂದು ಪುಟ್ಟ ಬಾಲಕ ಮಾಡಿದ ಕೆಲಸ.

ಈ ಬಾಲಕ ಮನೆಯ ಹೊರಗಡೆ ಆಟವಾಡ್ತಿದ್ದ ವೇಳೆ ಚಿರತೆಯ ಮರಿಯೊಂದು ಬಂದಿದೆ. ಆದರೆ ಆ ಪುಟ್ಟ ಮಗು ಅದೊಂದು ಬೆಕ್ಕಿನ ಮರಿ ಎಂದುಕೊಂಡು ಅದರ ಜೊತೆ ತುಂಬಾ ಆಟವಾಡಿದೆ. ನಂತರ ಅದನ್ನು ಹೊತ್ತುಕೊಂಡು ಮನೆಯೊಳಗೆ ಹೋಗಿದೆ. ಮಗುವಿನ ಕೈಯಲ್ಲಿ ಚಿರತೆ ಮರಿ ಕಂಡು ಇದನ್ನು ಕಂಡು ಕುಟುಂಬದ ಮಂದಿ ಆವಕ್ಕಾಗಿದ್ದಾರೆ. ಆದರೆ ಆ ಪುಟ್ಟ ಮಗು ಚಿರತೆ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಕಿಲಕಿಲ ನಗುತ್ತಿತ್ತು. ಆದರೆ ಮಗುವಿಗೆ ಚಿರತೆ ಮರಿ ಹಾಗೂ ಬೆಕ್ಕಿನ ಮರಿಯ ವ್ಯತ್ಯಾಸ ಗೊತ್ತಿದ್ದರೆ ತಾನೇ ? ಇಂತಹ ಒಂದು ವಿಚಿತ್ರ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ.

ನಾಸಿಕ್‌ನ ಮಾಲೆಗಾಂವ್‌ನ ರೈತ ಠಾಕ್ರೆ ಕುಟುಂಬವಾಗಿದ್ದು, ಇವರು ವಾಸ ಮಾಡುವ ಮನೆಯ ಸ್ವಲ್ಪ ದೂರದಲ್ಲಿ ಚಿರತೆವೊಂದು ಮರಿಗೆ ಜನ್ಮ ನೀಡಿದೆ. ಆಟವಾಡುತ್ತ ಅಲ್ಲಿಗೆ ತೆರಳಿರುವ ಬಾಲಕ ಅದು ಬೆಕ್ಕಿನ ಮರಿ ಎಂದುಕೊಂಡು ಮನೆಗೆ ಹೊತ್ತು ತಂದಿದ್ದಾನೆ. ಇದನ್ನ ಗಮನಿಸಿರುವ ಕುಟುಂಬಸ್ಥರು ಗಾಬರಿಗೊಳಗಾದರೂ ನಂತರ ಅದಕ್ಕೆ ಹಾಲು ನೀಡಿದ್ದಾರೆ. ಜತೆಗೆ ರಾತ್ರಿ ವೇಳೆ ತಾಯಿ ಬಂದು ಕರೆದುಕೊಂಡು ಹೋಗಬಹುದು ಎಂಬ ಉದ್ದೇಶದಿಂದ ಮನೆಯ ಹೊರಗಡೆ ಇಟ್ಟಿದ್ದಾರೆ. ಆದರೆ, ಬಾರದ ಕಾರಣ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಈ ಮಾಹಿತಿ ಸದ್ಯ ಊರಿನಲ್ಲಿ ಕಾಳ್ಗಿಚ್ಚಿನಂತೆ ಹರಿದಾಡ್ತಿದೆ.

Leave A Reply

Your email address will not be published.