ಗಂಡನ ಜೊತೆ ಓರಲ್ ಸೆಕ್ಸ್ ನಡೆಸಲು ಅಪ್ರಾಪ್ತ ಯುವತಿಗೆ ಖ್ಯಾತ ನಟಿಯಿಂದ ಒತ್ತಾಯ| ಕೋರ್ಟ್ ನಿಂದ ಅಚ್ಚರಿ ತೀರ್ಪು|

ಮೌಖಿಕ ಸಂಭೋಗ ಮಾಡಲು ಅಪ್ರಾಪ್ತ ಬಾಲಕಿಯನ್ನು ಬಳಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹಾಲಿವುಡ್ ನ ಪ್ರಖ್ಯಾತ ನಟ, ಮತ್ತು ನಟಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ಕೋರ್ಟ್ ಇಬ್ಬರನ್ನು ತಪ್ಪಿತಸ್ಥರೆಂದು ಹೇಳಿದೆ.

2016ರಲ್ಲಿ ಜಾಗತಿಕವಾಗಿ ತೆರೆಕಂಡು ಭಾರೀ ಯಶಸ್ಸು ಗಳಿಸಿದ ನಟ ಬೆನೆಡಿಕ್ಟ್ ಕಂಬರ್ಬ್ಯಾಚ್ ಅಭಿನಯದ “ಡಾಕ್ಟರ್ ಸ್ಟ್ರೇಂಜ್” ಚಿತ್ರದಲ್ಲಿ ನಟಿಸಿರುವ ಝರಾ ಪೈಥಿಯನ್ ಮತ್ತು ಆಕೆಯ ಗಂಡ ವಿಕ್ಟರ್ ಮಾರ್ಕ್ (59) ವಿರುದ್ಧ ಈ ಲೈಂಗಿಕ ಆರೋಪ ಕೇಳಿಬಂದಿತ್ತು. ಝರಾ ಪೈಥಿಯನ್ ನಟಿ ಮಾತ್ರ ಅಲ್ಲದೇ ಓರ್ವ ಮಾರ್ಷಲ್ ಆರ್ಟಿಸ್ಟ್ ಕೂಡಾ. ಡಾಕ್ಟರ್ ಸ್ಟ್ರೇಂಜ್ ಚಿತ್ರದ ಮೂಲಕ ತೆರೆಗೆ ಬಂದ ನಂತರ ಈಕೆಯ ಬೇಡಿಕೆ ಹೆಚ್ಚಿತು.


Ad Widget

Ad Widget

Ad Widget

ಘಟನೆ ವಿವರ : ಸಂತ್ರಸ್ತ ಹುಡುಗಿ ಹೇಳಿರುವ ಪ್ರಕಾರ, 2002 ಮತ್ತು 2003ರಲ್ಲಿ ನಾನು 13ನೇ ವಯಸ್ಸಿನವಳಿದ್ದಾಗ ನನ್ನ ಮೇಲೆ ಈ ಸ್ಟಾರ್ ನಟ, ಹಾಗೂ ನಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಗಂಭೀರ ಆರೋಪ ಮಾಡಿದ್ದಾಳೆ. ಇಷ್ಟು ಮಾತ್ರವಲ್ಲದೇ ನ್ಯಾಯಾಲಯದ ಮುಂದೆ ಹಾಜರಾಗಿ ಸಂತ್ರಸ್ತೆ ಕ್ಯಾಮೆರಾ ಮುಂದೆಯೇ ಹೇಳಿಕೆ ನೀಡಿದ್ದಾಳೆ. ನಾನು ಮಾಡುತ್ತಿರುವುದು ತಪ್ಪು ಎಂದು ನನಗೆ ಅನಿಸಿದರೂ ಆ ಪರಿಸ್ಥಿತಿಯಿಂದ ಹೊರಬರಲು ಅಥವಾ ಹೇಳಲು ನನಗೆ ಗೊತ್ತಾಗಲಿಲ್ಲ. ನಟಿ ತನ್ನ ಗಂಡನ ಜತೆ ಓರಲ್ ಸೆಕ್ಸ್ ನಡೆಸುವಂತೆ ಒತ್ತಾಯ ಮಾಡಿದ್ದು, ಅನಂತರ ಝರಾ ಪತಿ ಇಬ್ಬರೊಂದಿಗೂ ದೈಹಿಕ ಸಂಭೋಗವನ್ನು ಮಾಡಿದ್ದಾರೆ ಎಂಬುದಾಗಿ ಹುಡುಗಿ ಕೋರ್ಟ್ ಗೆ ಹೇಳಿದ್ದಳು.

ಬಾಲಕಿಯ ಮೇಲಿನ 14 ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನಟಿ ಮತ್ತು ಆಕೆಯ ಪತಿ ತಪ್ಪಿತಸ್ಥರೆಂದು ನ್ಯಾಯಾಲಯ ಇದೀಗ ತೀರ್ಪು ನೀಡಿದೆ.

Leave a Reply

error: Content is protected !!
Scroll to Top
%d bloggers like this: