ಮೈಸೂರಿನ ಮೃಗಾಲಯಕ್ಕೆ ಬಂದ್ರು ನೋಡಿ ಹೊಸ ನೆಂಟರು!!

ಯುದ್ಧಪೀಡಿತ ಉಕ್ರೇನ್‌ನಲ್ಲಿರುವ ಪ್ರಾಣಿಗಳಿಗೆ ಆಶ್ರಯ ನೀಡಲು ಮೃಗಾಲಯ ಸಜ್ಜುಗೊಂಡಿದೆ. ಉಕ್ರೇನ್​ನಲ್ಲಿ ನೆಲೆಸಿರುವ ಆಂಧ್ರ ಮೂಲದ ಪಾಟೀಲ ಎಂಬುವರು ತಮ್ಮ ತವರಿಗೆ ಮರಳಲು ಸಜ್ಜಾಗಿದ್ದಾರೆ. ಹೀಗಾಗಿ, ಉಕ್ರೇನ್​ನಲ್ಲಿ ಅವರು ಸಾಕಿರುವ ಒಂದು ಬ್ಲಾಕ್ ಫ್ಯಾಂಥರ್ ಹಾಗೂ ಜಗ್ವಾರ್ ಅನ್ನು ಭಾರತ ಸರ್ಕಾರಕ್ಕೆ ನೀಡಲು ಮುಂದಾಗಿದ್ದಾರೆ. 

ಉಕ್ರೇನ್ ಹೊಸ ಅತಿಥಿಗಳ ಜೊತೆಗೆ ಈ ಮೃಗಾಲಯದಲ್ಲಿಯೂ ಹೊಸ ಮರಿಗಳು ಜನ್ಮ ತಾಳಿವೆ.

ಒಂಬತ್ತು ವರ್ಷಗಳ ಬಳಿಕ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಬಿಳಿ ಹುಲಿಯೊಂದು 3 ಮರಿಗಳಿಗೆ ಜನ್ಮ ನೀಡಿದೆ. ಮೂರು ತಿಂಗಳ ಬಳಿಕ ಹುಲಿ ಮರಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. 

ಗಂಡು ಹುಲಿ ರಾಕಿ ಜೊತೆ ಹೆಣ್ಣು ಹುಲಿ ತಾರಾಗೆ ಬ್ರೀಡ್ ಮಾಡಿಸಲಾಗಿತ್ತು. ಒಂಬತ್ತು ವರ್ಷಗಳ ಬಳಿಕ ಮೃಗಾಲಯದ ಬಿಳಿ ಹುಲಿ ತಾರಾ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು ಆರೋಗ್ಯಕರವಾಗಿವೆ.

ಸದ್ಯಕ್ಕೆ ಮೃಗಾಲಯದಲ್ಲಿ 16 ಹುಲಿಗಳಿದ್ದು, ಮೈಸೂರು ಮೃಗಾಲಯ ಹುಲಿ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣವಾಗಿದೆ.

Leave A Reply

Your email address will not be published.