ಕಾರಿನ ಏರ್ ಫಿಲ್ಟರ್ ನಿಂದ ಬುಸುಗುಟ್ಟಿದ ನಾಗಪ್ಪ !!

ಶಿವಮೊಗ್ಗ : ಹಾವುಗಳು ಆಹಾರವನ್ನು ಹುಡುಕಿಕೊಂಡು ಅಥವಾ ಕಪ್ಪೆಗಳನ್ನು ಅಟ್ಟಾಡಿಸಿಕೊಂಡು ಬರುವಾಗ ನಾಯಿಗೋ, ಅಥವಾ ಇನ್ಯಾವುದೋ ಕಾರಣಕ್ಕೆ ಹೆದರಿಕೆ ಸೇಫ್ ಆದ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಮನೆ ಮುಂದೆ ಪಾರ್ಕಿಂಗ್ ಮಾಡುವ ಕಾರು ಬೈಕ್ ಗಳಲ್ಲೂ ಹಾವುಗಳು ಕಾಣಿಸಿಕೊಳ್ತಿರುವ ಬಗ್ಗೆ ಇತ್ತೀಚೆಗೆ ಹೆಚ್ಚು ವರದಿಯಾಗಿದ್ದು, ಇದೀಗ ಕಾರಿನ ಏರ್ ಫಿಲ್ಟರ್ ನಲ್ಲಿ ನಾಗರಹಾವು ಕಾಣಿಸಿಕೊಂಡಿರುವ ಭಯಾನಕ ಘಟನೆ ವರದಿಯಾಗಿದೆ.

ಶಿವಮೊಗ್ಗದ ಬಸವೇಶ್ವರ ನಗರದ ಎರಡನೇ ಕ್ರಾಸ್ ನಲ್ಲಿರುವ ಡಾಕ್ಟರ್ ಚಕ್ರವರ್ತಿ ಎಂಬುವವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಐ-10 ಕಾರಿನಲ್ಲಿ ಹಾವು ಕಾಣಿಸಿಕೊಂಡಿದೆ.ಕಾರನ್ನು ಚಲಾಯಿಸಿಕೊಂಡು ಹೋದಾಗ,ಚಕ್ರವರ್ತಿಯವರಿಗೆ ಏರ್ ಫಿಲ್ಟರ್ ನಲ್ಲಿ ಸದ್ದು ಕೇಳಿಸಿದೆ. ಇದರಿಂದ ಅನುಮಾನಗೊಂಡ ಅವರು ತಕ್ಷಣ ಸ್ನೇಕ್ ಕಿರಣ್ ಗೆ ಕರೆ ಮಾಡಿದ್ದಾರೆ.


Ad Widget

Ad Widget

Ad Widget

ಬಳಿಕ ಸ್ಥಳಕ್ಕೆ ದೌಡಾಯಿಸಿದ ಕಿರಣ್ ಏರ್ ಫಿಲ್ಟರ್ ನಲ್ಲಿದ್ದ ಸುಮಾರು ಮೂರುವರೆ ಅಡಿ ಉದ್ದದ ನಾಗರ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.ಅಷ್ಟೆ ಅಲ್ಲದೆ ಏರ್​ಫಿಲ್ಟರ್​ನಲ್ಲಿ ಇದ್ದಿದ್ದರಿಂದ ಹಾವನ್ನು ಸುರಕ್ಷಿತವಾಗಿ ರಕ್ಷಿಸಲು ಸ್ನೇಕ್​ ಕಿರಣ್ ಹರಸಾಹಸವೇ ಪಡಬೇಕಾಯ್ತು.ಹಾವನ್ನು ರಕ್ಷಿಸುವಂತಹ ಭಯಾನಕ ವಿಡಿಯೋ ಇಲ್ಲಿದೆ ನೋಡಿ.

Leave a Reply

error: Content is protected !!
Scroll to Top
%d bloggers like this: