ಸಾಗರದ ಅಲೆಯಲ್ಲಿ ತೇಲಿ ಬಂತು ” ಚಿನ್ನದ ರಥ” | ಹಗ್ಗ ಕಟ್ಟಿ ಎಳೆತಂದ ಗ್ರಾಮಸ್ಥರು!

ಅಸಾನಿ ಚಂಡಮಾರುತ ಅಬ್ಬರ ಜೋರಾಗಿದ್ದು, ಸಮುದ್ರದಲ್ಲಿ ಅಲೆಗಳು ಹೆಚ್ಚಾಗುತ್ತಿವೆ. ಹೀಗಿರುವಾಗ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಚಿನ್ನದ
ಬಣ್ಣ ಹೊಂದಿರುವ ರಥವೊಂದು ಅಲೆಯಲ್ಲಿ ತೇಲಿ ಬಂದಿದ್ದು, ಇದು ಮ್ಯಾನ್ಮಾರ್, ಮಲೇಷ್ಯಾ ಅಥವಾ ಥಾಯ್ಲೆಂಡ್ ದೇಶದಿಂದ ಬಂದಿರಬಹುದು ಎನ್ನಲಾಗಿದೆ.

ಮಂಗಳವಾರ ಸಂಜೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿ ಕರಾವಳಿಯಲ್ಲಿ ಈ ರಥ ಪತ್ತೆಯಾಗಿದೆ. ಗ್ರಾಮಸ್ಥರು ಹಗ್ಗಗಳನ್ನು ಕಟ್ಟಿ ದಡಕ್ಕೆ ಆ ರಥವನ್ನು ಎಳೆದು ತಂದಿದ್ದಾರೆ. ಈ ರಥದ ಶೈಲಿಯು ಆಗ್ನೇಯ ಏಷ್ಯಾ ರಾಷ್ಟ್ರಗಳ ಪ್ರಕಾರವನ್ನು ಹೋಲುತ್ತಿದೆ.


Ad Widget

Ad Widget

Ad Widget

ಈ ಹಿನ್ನೆಲೆಯಲ್ಲಿಯೇ ಇದು ಮ್ಯಾನ್ಮಾರ್, ಮಲೇಷ್ಯಾ ಅಥವಾ ಥಾಯ್ಲೆಂಡ್ ದೇಶದಿಂದ ಬಂದಿರಬಹುದು ಎಂದು ಊಹಿಸಲಾಗಿದೆ. “ಸಮುದ್ರ ತೀರದಲ್ಲಿ ಯಾವುದೋ ಚಲನಚಿತ್ರದ ಚಿತ್ರೀಕರಣಕ್ಕೆ ಈ ರಥವನ್ನು ಬಳಸಲಾಗಿದೆ ಎಂದು ನಾವು ಅಂದಾಜಿಸಿದ್ದೇವೆ. ಇನ್ನು ಸಮುದ್ರದಲ್ಲಿ ಚಂಡಮಾರುತದ ಅಬ್ಬರ ಹೆಚ್ಚಾದ ಕಾರಣ ಇದು ತೇಲಿಕೊಂಡು ಶ್ರೀಕಾಕುಳಂ ತೀರಕ್ಕೆ ಬಂದಿದೆ” ಸಂತೆಬೊಮ್ಮಾಳಿ ತಹಶೀಲ್ದಾರ್ ಜೆ.ಚಲಮಯ್ಯ ಜೊತೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: