ಮಂಗಳೂರು ವಿ.ವಿ.ಯಲ್ಲಿ ನಾಳೆಯಿಂದ ಎರಡು ದಿನ( ಮೇ.14-15) ಉದ್ಯೋಗ ಮೇಳ | ಹೆಚ್ಚಿನ ಮಾಹಿತಿ ಇಲ್ಲಿದೆ

ಮಂಗಳೂರು: ಮಂಗಳ ಗಂಗೋತ್ರಿಯ ಕ್ಯಾಂಪಸ್‌ನಲ್ಲಿ ಮೇ 14 ಮತ್ತು 15ರಂದು ಉದ್ಯೋಗ ಮೇಳ ಇರಲಿದ್ದು, ಮಂಗಳೂರು ವಿಶ್ವವಿದ್ಯಾಲಯದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಹಾಗೂ ತರಬೇತಿ ಮತ್ತು ನಿಯೋಜನಾ ಘಟಕಗಳು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಎರಡು ದಿನಗಳ ಕಾಲ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಸುಮಾರು 40 ಕಂಪನಿಗಳು ಭಾಗವಹಿಸಲಿದ್ದು, ಸುಮಾರು 11,100 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಯುಇಐಜಿಬಿ ಮತ್ತು ಯುಟಿಪಿಸಿ ಮಂಗಳೂರು ವಿಶ್ವವಿದ್ಯಾಲಯದ ವಿವಿಧ ಘಟಕ, ಸಂಯೋಜಿತ, ಸ್ವಾಯತ್ತ ಕಾಲೇಜುಗಳಿಂದ ಮತ್ತು ಮಂಗಳೂರು ವಿ.ವಿ. ಕ್ಯಾಂಪಸ್‌ನ ವಿದ್ಯಾರ್ಥಿಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಅದನ್ನು ಮ್ಯಾಜಿಕ್ ಬಸ್ ಎಂಬ ಸರ್ಕಾರೇತರ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಸಂಸ್ಥೆ ಅರ್ಜಿಗಳನ್ನು ಪರಿಶೀಲಿಸಿ, ಅರ್ಹರಿಗೆ ಟೋಕನ್ ಒದಗಿಸಿ ನೇಮಕಾತಿಗೆ ನೇರ ಸಂದರ್ಶನ ನಡೆಸಲಿದೆ. ಕನಿಷ್ಠ ವೇತನ ಹತ್ತು ಸಾವಿರ ಇರಲಿದೆ.

ಉದ್ಯೋಗಾಕಾಂಕ್ಷಿಗಳು ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಲು ಸಹ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ಬಯೊಡೇಟಾ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿಯ ಜೊತೆಗೆ ಗರಿಷ್ಠ ಅರ್ಹತೆಯ ಅಂಕಪಟ್ಟಿಯನ್ನು ತರಬೇಕು. ಅಂತಿಮ ವರ್ಷದ ಪದವಿ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರುವವರೂ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಪ್ರಕಟಣೆ ತಿಳಿಸಿದೆ.

ನಾಳೆ ಬರುವ ಕಂಪನಿಗಳ ವಿವರಗಳ ಬಗ್ಗೆ ತಿಳಿಯಲು ಈ ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡಿ!!

Leave A Reply

Your email address will not be published.