ದೇವಸ್ಥಾನದ ಉತ್ಸವದಲ್ಲಿ ಕೆಂಡಹಾಯ್ದ ಸಚಿವ ಶಿವರಾಮ ಹೆಬ್ಬಾರ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೂರ ಗ್ರಾಮದ ವೀರಭದ್ರೇಶ್ವರ ಮತ್ತು ಚೌಡೇಶ್ವರಿ ದೇವಸ್ಥಾನದಲ್ಲಿ ಇಂದು ನಡೆದ ಗುಗ್ಗಳ ಉತ್ಸವದ ವೇಳೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಭಕ್ತರ ಜೊತೆಗೆ ತಾವೂ ಕೂಡ  ಕೆಂಡ ಹಾಯ್ದಿದ್ದಾರೆ.

ಐತಿಹಾಸಿಕ ಪ್ರಸಿದ್ಧ ಬನವಾಸಿ ಹೋಬಳಿಯ  ಶ್ರೀ ವೀರಭದ್ರೇಶ್ವರ ಹಾಗೂ ನಾಗಚೌಡೇಶ್ವರಿ ನೂತನ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಪಕ್ಕದಲ್ಲಿ ಹರಕೆ‌ ಸಲ್ಲಿಸುವವರಿಗಾಗಿ ವ್ಯವಸ್ಥೆ ಮಾಡಲಾಗಿದ್ದ ಕೆಂಡದಲ್ಲಿ ಯಾವುದೇ ಅಳುಕಿಲ್ಲದೆ ಕೆಂಡ ನಡೆದರು

ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಉತ್ಸವದ ವೇಳೆ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಕಟ್ಟಿಕೊಂಡವರು, ಈಡೇರಿದ ಮೇಲೆ ಕೆಂಡ ಹಾಯುವ ಪದ್ಧತಿ ನಡೆಸಿಕೊಂಡು ಬರಲಾಗುತ್ತಿದೆ. 

ಶಿವರಾಮ್ ಹೆಬ್ಬಾರ್ ಕೂಡ ಹಿಂದೆ ಶ್ರೀ ವೀರಭದ್ರ ದೇವರಲ್ಲಿ ಹರಕೆ ಕಟ್ಟಿಕೊಂಡಿದ್ದು, ಅದು ನೆರವೇರಿರುವುದರಿಂದ ಅವರು ಸಹ ಕೆಂಡಹಾಯ್ದಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

Leave A Reply

Your email address will not be published.