ಈ ಕಂಪನಿಯಲ್ಲಿ ಒಮ್ಮೆ ಕೆಲ್ಸಕ್ಕೆ ಸೇರಿದ್ರೆ ಮುಗೀತು, ಎಲ್ಲಾ ಬೆನೆಫಿಟ್ಸ್ ಕೊಟ್ಟು, ವರ್ಷಕ್ಕೆ 2 ಸಲ ಸಂಬಳ ಜಾಸ್ತಿ ಮಾಡ್ಬಿಟ್ಟು ಹುಡುಗಿ ಹುಡುಕಿ ಮದುವೇನೂ ಮಾಡಿಸ್ತಾರೆ ! ಲೈಫ್ ಸೆಟ್ಲ್ ಗುರೂ…!!!

ಕಾರ್ಪೋರೇಟ್ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಪಿಎಫ್,ಇಎಸ್ ಐ, ಮೆಡಿಕಲ್ ಇನ್ಸ್ಯೂರೆನ್, ಚೈಲ್ಡ್ ಎಜ್ಯುಕೇಶನ್ ಸಪೋರ್ಟ್, ವರ್ಕ್ ಫ್ರಂ ಹೋಂ ಆಪ್ಶನ್, ವರ್ಷಕ್ಕೊಂದು ಬಾರಿ ಒಳ್ಳೆಯ ಇನ್ಕ್ರಿಮೆಂಟ್, ಮಧ್ಯಾಹ್ನ ಒಳ್ಳೆಯ ಊಟ, ಹೊತ್ತೊತ್ತಿಗೆ ಚಾ-ಕಾಫಿ, ವರ್ಷಕ್ಕೆ ಫ್ಯಾಮಿಲಿ ಟೂರ್ ಹೋಗಲು ಎಲ್ ಟಿಎ ಬೆನಿಫಿಟ್ ಹೀಗೆ ಏನೇನೆಲ್ಲಾ ಬೆನಿಫಿಟ್ ಕೊಟ್ಟು ಕಂಪನಿಯಲ್ಲಿ ತನ್ನ ಉದ್ಯೋಗಿಗಳು ಹೆಚ್ಚುಕಾಲ ಆರಾಮದಾಯಕವಾಗಿ ಕೆಲಸಮಾಡುವ ಹಾಗೆ ಮತ್ತು ತಮ್ಮದೇ ಕಂಪನಿಯಲ್ಲಿ ಹೆಚ್ಚು ಕಾಲ ಉಳಿದುಕೊಳ್ಳುವಂತೆ ರಿಟೆನ್ಶನ್ ಪ್ಲ್ಯಾನ್ ಮಾಡ್ತವೆ.

ಆದರೆ ಇಲ್ಲೊಂದು ಕಂಪನಿ ಎಲ್ಲರಿಗಿಂತ 7 ಹೆಜ್ಜೆ ಮುಂದೆ ನಡೆದಿದೆ. ಅದು, ಮದುವೆ ಆಗದವರಿಗೆ ಅನುರೂಪವಾದ ಹುಡುಗಿ/ಹುಡುಗ ಹುಡುಕಿ, ಇಬ್ಬರನ್ನೂ ಜೊತೆಗೆ 7 ಹೆಜ್ಜೆ- ಸಪ್ತ ಪದಿ ಹಾಕಿಸಲು ಕೂಡಾ ನಿರ್ಧರಿಸಿದೆ. ಇದು ನಾವು ನೀವು ಈ ತನಕ ಕೇಳಿರದ, ಈ ಕಾಲದ ಮಾಡರ್ನ್ ಹೆಚ್ ಆರ್ ಪಾಲಿಸಿ.

ಹೌದು, ಈ ಮಾದರಿ ಪಾಲಿಸಿಯನ್ನು ಎಸ್ಎಎಂಐ ಎಂಬ ಕಂಪನಿ ಅನುಷ್ಠಾನಕ್ಕೆ ತಂದಿದೆ. ಮದುವೆಯಾಗಲು ಬಯಸುವ ತನ್ನ ಕಂಪನಿಯ ಉದ್ಯೋಗಿಗಳಿಗೆ ಉಚಿತವಾಗಿ ಅವರಿಗೆ ಹೊಂದುವಂತ ಸಂಬಂಧವನ್ನು ನೋಡುವ ಮತ್ತು ಮದುವೆಯಾದ ಉದ್ಯೋಗಿಗಳಿಗೆ ವರ್ಷಕ್ಕೆ ಎರಡು ಬಾರಿ ಸಂಬಳ ಹೆಚ್ಚಳ ಮಾಡುವ ಯೋಜನೆ ಮಾಡಿದೆಯಂತೆ. ಈ ಆಫರ್ ಯಾರಿಗುಂಟು ಯಾರಿಗಿಲ್ಲ ಹೇಳಿ ?

ಈ ಯೋಜನೆ ಕಂಪನಿ ನೀಡಿದ ಮೇಲೆ ನೌಕರರು ಸಂಸ್ಥೆಯಿಂದ ನಿರ್ಗಮಿಸುವ ಪ್ರಕರಣಗಳು 10%ಕ್ಕಿಂತ ಕಡಿಮೆಯಾಗುತ್ತಿದೆಯಂತೆ. ಮತ್ತು ಎಸ್ಎಂಐ ಕಂಪನಿಯಲ್ಲಿ ಒಟ್ಟು 750 ಉದ್ಯೋಗಿಗಳಿದ್ದು, ಅವರಲ್ಲಿ ಶೇ.40 ರಷ್ಟು ಮಂದಿ ಐದು ವರ್ಷಕ್ಕೂ ಹೆಚ್ಚು ಕಾಲ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯ ಬಗ್ಗೆ ಹೇಳುವುದಾದರೆ ಎಸ್ಎಂಐ ಕಂಪನಿ ಮೊದಲು 2006ರಲ್ಲಿ ಶಿವಕಾಶಿಯಲ್ಲಿ ಪ್ರಾರಂಭವಾಯಿತು. ಉದ್ಯೋಗಿಗಳ ಸಂಖ್ಯೆ ಮತ್ತು ಉದ್ಯಮ ಏರಿಕೆಯಾಗುತ್ತಾ ಹೋಯಿತು. ಹೀಗಾಗಿ 2010ರಲ್ಲಿ ಮಧುರೈಗೆ ಕಂಪನಿಯನ್ನು ಸ್ಥಳಾಂತರ ಮಾಡಲಾಯಿತು.

“ನಮ್ಮ ಕಂಪನಿ ಕಠಿಣ ಪರಿಶ್ರಮದಲ್ಲಿ ನಂಬಿಕೆಯನ್ನು ಹೊಂದಿದೆ. ಟೈರ್-1 ನಗರದಲ್ಲಿ ಇಂತಹ ಕಂಪನಿಯನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ಕಠಿಣ ಪರಿಶ್ರಮದಿಂದ ಎಲ್ಲವೂ ನಡೆಯಿತು” ಎನ್ನುತ್ತಾರೆ ಎಸ್ಎಂಐ ಸಂಸ್ಥಾಪಕ ಮತ್ತು ಸಿಇಒ ಎಂಪಿ ಸೆಲ್ವ ಗಣೇಶ್, ಎಸ್ಎಎಂಐ ಕಂಪನಿ ಪ್ರಸ್ತುತ ಸುಮಾರು 100 ಕೋಟಿ ಆದಾಯವನ್ನು ಗಳಿಸುತ್ತಿದೆ.

ಸಿಇಒ ಸೆಲ್ವ ಗಣೇಶ್ ಅವರು ತಿರುಪುರದ ಜವಳಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದು, ನಂತರ ಬೆಂಗಳೂರಿಗೆ ಬಂದು ಐಟಿ ಕಂಪನಿ ಸೇರಿ ಐಬಿಎಂನಲ್ಲೂ ಕೆಲಸ ಮಾಡಿದರು. ಆದರೆ ಎಸ್‌ಐಎಂ ಕಂಪನಿ ಕಟ್ಟುವ ಆಸೆ ಹೊಂದಿದ್ದ ಸೆಲ್ವ ಗಣೇಶ್ ಅಂತಿಮವಾಗಿ ಕೆಲಸ ಬಿಟ್ಟು ಕಂಪನಿ ಕಟ್ಟುವತ್ತ ಗಮನ ಹರಿಸಿದರು. ಆರಂಭದಲ್ಲಿ ಎಸ್ಎಂಐ, ಮಧುರೈ ಮೂಲದ ಸ್ಟಾರ್ಟಪ್ ಎಂಬ ಹಣೆಪಟ್ಟಿ ಹೊಂದಿದ್ದರೂ ನೌಕರರನ್ನು ಆಕರ್ಷಿಸುವುದು ಇವರಿಗೆ ಸವಾಲಾಗಿತ್ತು. ನಂತರ ಕೆಲವು ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಂಪನಿಯು ಬೆಳೆಯಿತು. ಸಿಬ್ಬಂದಿಗಳು ನನ್ನನ್ನು ಸಹೋದರನಂತೆ ನೋಡುತ್ತಾರೆ ಮತ್ತು ಅವರಲ್ಲಿ ಹಲವರು ಹಳ್ಳಿಗಳಿಂದ ಬಂದವರು, ವಯಸ್ಸಾದ ಪೋಷಕರಿದ್ದಾರೆ. ಅವರಿಗೆ ಸಹಾಯ ಮಾಡಲು ಸಂಬಳ ಹೆಚ್ಚಳದಂತ ಕ್ರಮಗಳನ್ನು ಅನುಸರಿಸುತ್ತಿದ್ದೇನೆ ಎಂದಿದ್ದಾರೆ.

ಕಂಪನಿಯ ಪ್ರಾರಂಭದ ಮೊದಲ ದಿನದಿಂದ ಮದುವೆ ಇಕ್ರಿಮೆಂಟ್ ಯೋಜನೆ ಇದ್ದು, ನಂತರದ ದಿನಗಳಲ್ಲಿ ಮ್ಯಾಚ್ ಮೇಕಿಂಗ್ ಯೋಜನೆಯನ್ನು ಕಂಪನಿ ಅಳವಡಿಸಿಕೊಂಡಿತು. ಮದುವೆಯಾಗಲು ಬಯಸುವವರಿಗೆ ಕಂಪನಿಯೇ ಒಳ್ಳೆ ಸಂಬಂಧವನ್ನು ಹುಡುಕಲು ಕಂಪ್ಲೀಟ್ ಸಹಾಯ ಮಾಡುತ್ತದೆ.

ಪ್ರಸ್ತುತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಸಿಇಒ ತಿಳಿಸಿದರು. ಇಂತಹ ಅವಕಾಶವು ಉದ್ಯೋಗಿಗಳನ್ನು ಇತರ ಕಂಪನಿಗಳಿಗೆ ಬದಲಾಯಿಸುವುದನ್ನು ತಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೆಚ್ಚುತ್ತಿರುವ ವೆಚ್ಚಕ್ಕೆ ಅನುಗುಣವಾಗಿ ನೌಕರರಿಗೆ ಇಂಕ್ರಿಮೆಂಟ್ ನೀಡಲಾಗುತ್ತಿದೆ ಎಂದರು. ಅದೇ ರೀತಿ, ತಮ್ಮ ಕಂಪನಿಗೆ ಸೇರುವ ಉದ್ಯೋಗಿಗೆ ಮೊದಲ ದಿನದಿಂದ ನಿಗದಿತ ಇಂಕ್ರಿಮೆಂಟ್ ಇರುತ್ತದೆ ಎಂದಿದ್ದಾರೆ.

Leave A Reply

Your email address will not be published.