ರಾಜ್ಯದ 7 ಎಂ.ಎಲ್.ಸಿ ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.3 ರಂದು ಮತದಾನ, ಅಂದೇ ಫಲಿತಾಂಶ

ಬೆಂಗಳೂರು: ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ಆಯೋಗದಿಂದ ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳ ಅವಧಿಯು ದಿನಾಂಕ 14-06-2022ರಂದು ಕೊನೆಗೊಳ್ಳಲಿದೆ.

ಈ ಸ್ಥಾನಗಳಿಗೆ ದಿನಾಂಕ 03-06-2022ರಂದು ಮತದಾನ ನಡೆಯಲಿದೆ ಎಂಬುದಾಗಿ ತಿಳಿಸಿದೆ.

ಕೆಳಗೆ ನೀಡಲಾಗಿರುವ ಪರಿಷತ್ ಸದಸ್ಯರ ಕಾಲಾವಧಿ ಮುಕ್ತಾಯಗೊಳ್ಳಲಿದೆ.
ಲಕ್ಷ್ಮಣ್ ಸವದಿ, ರಾಮಪ್ಪ ತಿಮ್ಮಾಪುರ್ , ಅಲ್ಲಂ ವೀರಭದ್ರಪ್ಪ, ಹೆಚ್ ಎಂ ರಮೇಶ್ ಗೌಡ, ವೀಣಾ ಅಚ್ಚಯ್ಯ ಎಸ್, ನಾರಾಯಣ ಸ್ವಾಮಿ ಕೆ.ವಿ., ಲೇಹರ್ ಸಿಂಗ್

ಚುನಾವಣಾ ದಿನಾಂಕಗಳ ಮಾಹಿತಿ

ದಿ.17-05-2022ರಂದು ಚುನಾವಣಾ ಅಧಿಸೂಚನೆ ಪ್ರಕಟ
ದಿನಾಂಕ 24-05-2022ರಂದು ನಾಮಪತ್ರ ಸಲ್ಲಿಸಲು
ಕೊನೆಯ ದಿನ
ದಿನಾಂಕ 25-05-2022ರಂದು ನಾಮಪತ್ರಗಳ ಪರಿಶೀಲನೆ
ದಿನಾಂಕ 27-05-2022ರಂದು ನಾಮಪತ್ರ
ವಾಪಾಸ್ ಪಡೆಯಲು ಕೊನೆ ದಿನ
ದಿನಾಂಕ 03-06-2022ರಂದು ಮತದಾನ ಬೆಳಿಗ್ಗೆ 9
ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ದಿನಾಂಕ 03-06-2022ರಂದು ಸಂಜೆ 5 ಗಂಟೆಗೆ
ಮತ ಏಣಿಕೆ ಕಾರ್ಯ ನಡೆದು, ಫಲಿತಾಂಶ ಘೋಷಣೆ  ದಿನಾಂಕ 07-06-2022ರಂದು ಚುನಾವಣಾ ಕಾರ್ಯ ಮುಕ್ತಾಯ

Leave A Reply

Your email address will not be published.