ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ತೀವ್ರ ಪ್ರಯತ್ನ – ಶಾಹಿದ್ ಆಫ್ರಿದಿ ವಿರುದ್ಧ ಕನೇರಿಯಾ ಆರೋಪ

ಡ್ಯಾನಿಶ್ ಕನೇರಿಯಾ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಆಟಗಾರನನ್ನು ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದಡಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಿಂದ ಸಸ್ಪೆಂಡ್‌ ಮಾಡಲಾಗಿತ್ತು. ಈ ಬಗ್ಗೆ ಅವರು ಇತ್ತೀಚೆಗಷ್ಟೇ IANS ಸುದ್ದಿಸಂಸ್ಥೆಯ ಜತೆಗೆ ಮಾತನಾಡುತ್ತಾ, “ಶಾಹಿದ್ ಆಫ್ರಿದಿ ಓರ್ವ ದೊಡ್ಡ ಸುಳ್ಳುಗಾರ. ನಾನು ಹಿಂದು ಎನ್ನುವ ಒಂದೇ ಕಾರಣಕ್ಕೆ ಪಾಕಿಸ್ತಾನ ತಂಡದಲ್ಲಿ ಆತ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ , ನನ್ನ ವಿರುದ್ಧ ಪಿತೂರಿ ಮಾಡಿದ್ದರು ಎಂಬ ಆರೋಪ ಮಾಡಿದ್ದರು. ನನ್ನ ಮೇಲೆ ಕೆಲವೊಂದು ಸುಳ್ಳು ಆರೋಪಗಳನ್ನು ಮಾಡಲಾಗಿತ್ತು. ಸ್ಪಾಟ್ ಫಿಕ್ಸಿಂಗ್ ಮಾಡಿದ ವ್ಯಕ್ತಿಯ ಜತೆ ನನ್ನ ಹೆಸರನ್ನು ತಳುಕು ಹಾಕಲಾಗಿತ್ತು. ಆದರೆ ನನ್ನನ್ನೇ ಏಕೆ ಗುರಿ ಮಾಡಲಾಯಿತು ಎನ್ನುವುದು ಗೊತ್ತಿಲ್ಲ. ನನ್ನ ಮೇಲಿರುವ ಬ್ಯಾನ್ ಶಿಕ್ಷೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತೆರವು ಮಾಡಲಿಎಂದು ನಾನು ಕೇಳಿಕೊಳ್ಳುತ್ತೇನೆಂದು” ಕನೇರಿಯಾ ಹೇಳಿದ್ದರು.

ಅನಂತರ ಕಳೆದ ವಾರ ಕನೇರಿಯಾ, ‘ಆಫ್ರಿದಿ ನನ್ನನ್ನು ಇಸ್ಲಾಂಗೆ ಮತಾಂತರ ಮಾಡಲು ಒತ್ತಾಯ ಮಾಡಿದ್ದರು. ಆದರೆ ನಾನು ನನ್ನ ಧರ್ಮವನ್ನೇ ನಂಬಿದ್ದೆ’ ಎಂಬ ಹೇಳಿಕೆ ನೀಡಿದ್ದೆ.

ಇದಕ್ಕೆ ಟ್ವೀಟ್ ಮಾಡಿರುವ ಆಫ್ರಿದಿ “ಹಣ ಮತ್ತು ಅಗ್ಗದ ಖ್ಯಾತಿಗಾಗಿ ಕನೇರಿಯಾ ಇದನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅವರ ಚಾರಿತ್ರ್ಯದ ಬಗ್ಗೆ ಎಲ್ಲರಿಗೂ ಗೊತ್ತು, ನನ್ನ ವರ್ತನೆ ಕೆಟ್ಟದಾಗಿದ್ದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಥವಾ ಅವರು ಆಡುತ್ತಿರುವ ಇಲಾಖೆಗೆ ಏಕೆ ದೂರು ನೀಡಲಿಲ್ಲ, ಅವರು ನಮ್ಮ ಶತ್ರು ದೇಶಕ್ಕೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸಂದರ್ಶನಗಳನ್ನು ನೀಡುತ್ತಿದ್ದಾರೆ’ ಎಂದು ಆಫ್ರಿದಿ ಮಾಜಿ ಸ್ಪಿನ್ನರ್‌ನನ್ನು ಪ್ರಶ್ನಿಸಿದ್ದಾರೆ.

ಆದ್ರೀಗ ಇದಕ್ಕೆ ತಕ್ಕ ಉತ್ತರ ನೀಡಿರುವ ಕನೇರಿಯಾ ‘ಭಾರತ ನಮ್ಮ ಶತ್ರುವಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸುವವರೇ ನಮ್ಮ ಶತ್ರುಗಳು’ ಎಂದು ಆಫ್ರಿದಿಗೆ ಪ್ರತ್ಯುತ್ತರ ನೀಡಿದ್ದಾರೆ. ನೀವು ಭಾರತವನ್ನು ನಿಮ್ಮ ಶತ್ರು ಎಂದು ಪರಿಗಣಿಸಿದರೆ, ಯಾವುದೇ ಭಾರತೀಯ ಮಾಧ್ಯಮ ಚಾನಲ್‌ಗಳಿಗೆ ಎಂದಿಗೂ ಹೋಗಬೇಡಿ ” ಎಂದು ಡ್ಯಾನಿಶ್ ಕನೇರಿಯಾ ಟ್ವಿಟ್ ಮಾಡಿದ್ದಾರೆ.

ಇನ್ನು ಕ್ರಿಕೆಟ್‌ ಬೋರ್ಡ್‌ಗೆ ಏಕೆ ದೂರು ನೀಡಲಿಲ್ಲ ಎಂದು ಆಫ್ರಿದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕನೇರಿಯಾ ”ಬಲವಂತದ ಮತಾಂತರದ ವಿರುದ್ಧ ನಾನು ಧ್ವನಿ ಎತ್ತಿದಾಗ, ನನ್ನ ವೃತ್ತಿಜೀವನ ನಾಶವಾಗುತ್ತದೆ ಎಂದು ನನಗೆ ಬೆದರಿಕೆ ಹಾಕಲಾಯಿತು” ಎಂಬ ಗಂಭೀರ ಆರೋಪ ಮಾಡಿದ್ದಾರೆ.

Leave A Reply

Your email address will not be published.