ಪಾಲಕ್ಕಾಡ್: ಪಿ.ಎಫ್.ಐ ಮುಖಂಡ ಸುಬೈರ್ ಹತ್ಯೆ ಪ್ರಕರಣ!! ಆರ್ ಎಸ್ ಎಸ್ ಕಾರ್ಯಕರ್ತರೆನ್ನಲಾದ ಮೂವರ ಬಂಧನ

ಕೇರಳ: ಇಲ್ಲಿನ ಪಾಲಕ್ಕಾಡ್ ಎಳಪುಳ್ಳಿ ಎಂಬಲ್ಲಿ ನಡೆದಿದ್ದ ಪಿ.ಎಫ್.ಐ ನಾಯಕ ಸುಬೈರ್ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತರನ್ನು ಆರ್.ಎಸ್.ಎಸ್ ಕಾರ್ಯಕರ್ತರೆನ್ನಲಾದ ಸುಚಿತ್ರನ್,ಗಿರೀಶ್ ಹಾಗೂ ಜಿನಿಶ್ ಎಂದು ಗುರುತಿಸಲಾಗಿದ್ದು,ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.


Ad Widget

Ad Widget

Ad Widget

ಕಳೆದ ನವೆಂಬರ್ ತಿಂಗಳಲ್ಲಿ ಆರ್.ಎಸ್.ಎಸ್ ಕಾರ್ಯಕರ್ತ ಸಂಜಿತ್ ಎಂಬವರನ್ನು ಎಸ್.ಡಿ.ಪಿ.ಐ ಕಾರ್ಯಕರ್ತರು ಹತ್ಯೆ ನಡೆಸಿದ್ದು,ಈ ಕೊಲೆಗೆ ಪ್ರತೀಕಾರವಾಗಿ ಸುಬೈರ್ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಸುಬೈರ್ ಹತ್ಯೆ ನಡೆದ ಮರುದಿನವೇ ಪಾಲಕ್ಕಾಡ್ ನಲ್ಲಿ ಆರ್.ಎಸ್.ಎಸ್ ಮುಖಂಡ ಎಸ್ ಕೆ ಶ್ರೀನಿವಾಸನ್ (45) ಎಂಬವರನ್ನು ಬೈಕಿನಲ್ಲಿ ತೆರಳುತ್ತಿರುವಾಗ ಗುಂಪೊಂದು ಭೀಕರವಾಗಿ ಹತ್ಯೆ ನಡೆಸಿತ್ತು.

ಸದ್ಯ ಸಂಜಿತ್ ಹತ್ಯೆಯ ಪ್ರಮುಖ ಆರೋಪಿಯ ಬಂಧನವಾಗಿದೆ. ಒಟ್ಟಿನಲ್ಲಿ ದೇವರ ನಾಡು ಕೇರಳದಲ್ಲಿ ನಡೆದ ಮೂರು ಕೊಲೆಯೂ ದ್ವೇಷ ಸಾಧಿಸುವ ನಿಟ್ಟಿನಲ್ಲಿ ನಡೆದಿದ್ದು, ವ್ಯವಸ್ಥಿತ ಸಂಚು ರೂಪಿಸಿ ಕೇರಳದಲ್ಲಿ ತಮ್ಮ ಹಿಡಿತ ಸಾಧಿಸಲು ಕೊಲೆಯೇ ಮಾರ್ಗವಾದಂತಿದೆ.

Leave a Reply

error: Content is protected !!
Scroll to Top
%d bloggers like this: