ಯಾವುದೇ ಬ್ಯಾಟಿಂಗ್ ಗೆ ಮೊದಲು ತನ್ನ ಬ್ಯಾಟ್ ಕಚ್ಚಿ ತಿನ್ನುವ ಎಂ.ಎಸ್. ಧೋನಿ: ಕಾರಣವೇನು? ಇಲ್ಲಿದೆ ಉತ್ತರ!

ಈಗ ಐಪಿಎಲ್ ಹವಾ. ಕ್ರಿಕೆಟ್ ಪ್ರೇಮಿಗಳಿಗಂತೂ ರಸದೌತಣ ಎಂದರೆ ತಪ್ಪಾಗಲಾರದು. ಈ ಬಾರಿಯ ಐಪಿಎಲ್ ಭಾರೀ ಕುತೂಹಲ ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು.

ಆದರೆ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರುವುದು ಈಗ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಬಗ್ಗೆ. ಭಾನುವಾರ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಬ್ಯಾಟಿಂಗ್ ಗೆ ತೆರಳುವ ಮೊದಲು ಧೋನಿ ತನ್ನ ಬ್ಯಾಟ್ ಅನ್ನು ತಿನ್ನುವುದು ಅಥವಾ ಅಗಿಯುವುದು ಕಂಡುಬಂದಿದೆ. ಈ ಫೋಟೋ ಕೂಡಾ ಈಗ ವೈರಲ್ ಆಗಿದೆ.


Ad Widget

Ad Widget

Ad Widget

ಇದು ಅನೇಕ ಕ್ರೀಡಾ ಪ್ರೇಮಿಗಳನ್ನು ಆಶ್ಚರ್ಯಗೊಳಿಸಿದೆ. ಯಾಕೆ ಧೋನಿ ಬ್ಯಾಟ್ ಕಚ್ಚುತ್ತಾರೆ? ಎಂಬ ಪ್ರಶ್ನೆ ನಿಮಗೂ ಮೂಡಿರಬಹುದು. ಆದರೆ ಇದರ ರಹಸ್ಯ ಮಾತ್ರ ಹೊರಬಿದ್ದಿದೆ. ಈ ಗುಟ್ಟು ರಟ್ಟು ಮಾಡಿದ್ದು ಬೇರೆ ಯಾರೂ ಅಲ್ಲ, ಧೋನಿ ಜೊತೆ ಡ್ರೆಸ್ಸಿಂಗ್ ರೂಂ ಶೇರ್ ಮಾಡ್ತಾ ಇದ್ದ ಅಮಿತ್ ಮಿಶ್ರಾ.

ಟೇಪ್ ತೆಗೆದು ತನ್ನ ಬ್ಯಾಟ್ ಅನ್ನು ಸ್ವಚ್ಛಮಾಡಲು ಧೋನಿ ಹಾಗೆ ಮಾಡುತ್ತಾರೆ ಎಂದು ಮಿಶ್ರಾ ಬಹಿರಂಗಪಡಿಸಿದ್ದಾರೆ.

ಒಂದು ವೇಳೆ ಧೋನಿ ಆಗಾಗ್ಗೆ ಅವರ ಬ್ಯಾಟ್ ಅನ್ನು ತಿನ್ನುತ್ತಾರೆ ಎಂದರೆ, ಅವರು ತನ್ನ ಬ್ಯಾಟ್ ನ್ನು ಸ್ವಚ್ಛವಾಗಿಡಲು ಇಷ್ಟಪಡುವ ಕಾರಣ ಬ್ಯಾಟ್ ನ ಟೇಪ್ ಅನ್ನು ತೆಗೆದು ಹಾಗೆ ಮಾಡುತ್ತಾರೆ. ಬ್ಯಾಟ್‌ನಿಂದ ಒಂದೇ ಒಂದು ತುಂಡು ಟೇಪ್ ಅಥವಾ ಥ್ರೆಡ್ ಹೊರಬರುವುದನ್ನು ನೀವು ಕಾಣುವುದಿಲ್ಲ ಎಂದು ಮಿಶ್ರಾ ಟ್ವೀಟ್ ಮಾಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: