ಮಲ್ಪೆ ಬೀಚ್ ನಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಫ್ಲೋಟಿಂಗ್ ಬ್ರಿಡ್ಜ್ ಹಾನಿ|ಪ್ರವಾಸಿಗರು ಯಾವುದೇ ವದಂತಿಗಳಿಗೆ ಕಿವಿ ಕೊಡಬಾರದು ಎಂದ ಬೀಚ್ ಗುತ್ತಿಗೆದಾರ

ಉಡುಪಿ :ಮಲ್ಪೆ ಬೀಚ್‌ನಲ್ಲಿ ಸ್ಥಾಪಿಸಿದ್ದ ಫ್ಲೋಟಿಂಗ್ ಬ್ರಿಡ್ಜ್ ಶುಕ್ರವಾರ ಲೋಕಾರ್ಪಣೆಗೊಂಡಿದ್ದು,ಒಂದು ವಾರದೊಳಗೆ ಕಡಲಿನ ಅಬ್ಬರಕ್ಕೆ ಸೇತುವೆ ಹಾನಿಗೊಂಡಿದೆ ಎಂಬ ಸುಳ್ಳು ಸುದ್ದಿ ಹರಡಿತ್ತು. ಇದೀಗ ಮಲ್ಪೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಈ ತೇಲುವ ಸೇತುವೆಯಲ್ಲಿ ಸುರಕ್ಷತೆಯ ದೃಷ್ಠಿಯಿಂದ ಸೆಂಟರ್ ಲಾಕ್ ವ್ಯವಸ್ಥೆಯನ್ನು ತೆಗೆದಿಡಲಾಗಿದೆ. ಇದರಿಂದಾಗಿ ಸೇತುವೆಯ ಕೆಲವು ಬ್ಲಾಕ್‌ಗಳು ಸಮುದ್ರದಲ್ಲಿ ತೇಲುತ್ತಿದ್ದವು. ಆದರೆ ಜನರು ಇದನ್ನು ತಪ್ಪಾಗಿ ಗ್ರಹಿಸಿಕೊಂಡು ವಂದತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸೇತುವೆ ತುಂಡಾಗಿದೆ, ಸುರಕ್ಷಿತವಾಗಿಲ್ಲ ಎಂಬ ಮಾತುಗಳು
ಕೇಳಿ ಬರುತ್ತಿದೆ. ಆದರೆ ಸೇತುವೆ ಸಂಪೂರ್ಣವಾಗಿ
ಸುರಕ್ಷಿತವಾಗಿದ್ದು ಯಾವುದೇ ತೊಂದರೆಗಳು ಆಗಿಲ್ಲ.
ತೇಲುವ ಸೇತುವೆಗೂ ಯಾವುದೇ ಹಾನಿಯಾಗಿಲ್ಲ. ಅಲ್ಲದೆ
ತೇಲುವ ಸೇತುವೆಯಲ್ಲಿ ಯಾವುದೇ ಪ್ರಾಣ ಹಾನಿ
ಸಂಭವಿಸಿಲ್ಲ. ಪ್ರವಾಸಿಗರು ಹಾಗೂ ಸಾರ್ವಜನಿಕರು
ಯಾವುದೇ ವದಂತಿಗಳಿಗೆ ಕಿವಿ ಕೊಡಬಾರದು ಎಂದಿದ್ದಾರೆ.

ಚಂಡಮಾರುತದ ಪರಿಣಾಮ ಸಮುದ್ರದಲ್ಲಿ
ಉಂಟಾಗಿರುವ ಅಲೆಗಳ ಅಬ್ಬರದಿಂದಾಗಿ ಮುಂಜಾಗೃತಾ
ಕ್ರಮವಾಗಿ ನೂತನವಾಗಿ ಆರಂಭಗೊಂಡಿರುವ ತೇಲುವ ಸೇತುವೆ ಸೇರಿದಂತೆ,ಜಲ ಕ್ರೀಡೆಗಳನ್ನು ಮೂರು ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಸೈಕ್ಲೋನ್
ಪ್ರಭಾವ ಕಡಿಮೆ ಆದ ಬಳಿಕ ಮತ್ತೆ ಆರಂಭಿಸಲಾಗುವುದು
ಎಂದು ತಿಳಿಸಿದ್ದಾರೆ.

Leave A Reply

Your email address will not be published.