ಪವಿತ್ರ ವೃಕ್ಷದ ಎದುರು ಬೆತ್ತಲೆ ಫೋಸ್ ನೀಡಿದಾಕೆಗೆ ಜೈಲು ಶಿಕ್ಷೆ !

ಪ್ರತಿಯೊಂದು ದೇಶವು ಅದರದ್ದೇ ಆದ ಒಂದು ವೈಶಿಷ್ಟ್ಯತೆಯನ್ನು ಹೊಂದಿದೆ. ಅದು ಧಾರ್ಮಿಕ ಕ್ಷೇತ್ರದ್ದೇ ಆಗಿರಬಹುದು ಅಥವಾ ಇನ್ಯಾವುದೋ ವಿಷಯ ಆಗಿರಬಹುದು. ಅದನ್ನೆಲ್ಲಾ ನಾವು ತಿಳಿದುಕೊಂಡು ಅದ್ಯಾವುದಕ್ಕೂ ಅಪಚಾರ ಮಾಡದೆ, ಭಕ್ತಭಾವದಿಂದ ಕಾಣಬೇಕು. ಇದು ಎಲ್ಲರಿಗೂ ಸಾಧಾರಣವಾಗಿ ತಿಳಿದಿರುವ ವಿಷಯ. ಅದಾಗ್ಯೂ, ಕೆಲವೊಮ್ಮೆ ಕೆಲವರು ಗೊತ್ತಿದೆಯೋ ಗೊತ್ತಿಲ್ಲದೆಯೋ ಅಪಚಾರ ಮಾಡುತ್ತಾರೆ. ಅದು ಅಲ್ಲಿಯವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿ, ಕೊನೆಗೆ ಏನಾಗುತ್ತದೆ ? ಇಲ್ಲಿದೆ ನೋಡಿ ಅಂಥಹ ಒಂದು ಪ್ರಸಂಗ.

ರಷ್ಯಾದ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಮಹಿಳೆಯೊಬ್ಬರು ಬಾಲಿ ದೇವಸ್ಥಾನದಲ್ಲಿ 700 ವರ್ಷಗಳಷ್ಟು ಹಳೆಯದಾದ ಪವಿತ್ರ ವೃಕ್ಷದ ಪಕ್ಕದಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ ಪರಿಣಾಮ ಆರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡವನ್ನು ಎದುರಿಸುತ್ತಿದ್ದಾರೆ.


Ad Widget

Ad Widget

Ad Widget

ಅಲೀನಾ ಘಜೀವಾ ಇದೀಗ ತಮ್ಮ ಖಾತೆಗಳಿಂದ ಬೆತ್ತಲೆ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಮಾತ್ರವಲ್ಲದೇ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಘಟನೆಯಿಂದ ನಾನು ಮುಜುಗರ ಅನುಭವಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನಾನು ಯಾವುದೇ ರೀತಿಯ ಅಪರಾಧವನ್ನೆಸಗುವ ಉದ್ದೇಶವನ್ನು ಹೊಂದಿರಲಿಲ್ಲ. ಈ ಸ್ಥಳದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಮಾಡುವುದನ್ನೆಲ್ಲಾ‌ ಮಾಡಿ ಈಗ ಗೊತ್ತಿಲ್ಲ ಎಂದರೆ ಆಗುವುದು ಹೀಗೆಯೇ.

Leave a Reply

error: Content is protected !!
Scroll to Top
%d bloggers like this: