ಕಾಡಿನ ರಾಜ ಸಿಂಹನನ್ನು ನರಮನುಷ್ಯನೊಬ್ಬ ಕೋಲಿನಿಂದ ಅಟ್ಟಿಸಿದ ವೀಡಿಯೋ ವೈರಲ್ | ಎಲ್ಲಾ ಕಾರ್ಯಕ್ಕೂ ಆತ್ಮವಿಶ್ವಾಸವೇ ಕೀಲಿಕೈ!

0 6

ಕಾಡಿನ ರಾಜ ಸಿಂಹ ಅಂದರೆ ಗತ್ತು, ಗಾಂಭೀರ್ಯ, ಶೌರ್ಯಕ್ಕೆ ಹೆಸರುವಾಸಿ. ಇಂತಿಪ್ಪ ಈ ಸಿಂಹವನ್ನು ಯಾರಾದರೂ ಬೆದರಿಸುವುದುಂಟೇ ? ಅದು ಕೂಡಾ ಕೋಲು ಹಿಡಿದು..! ನರಮನುಷ್ಯನೊಬ್ಬ ಬರಿಯ ಕೋಲಿನಿಂದ ಅಟ್ಟಿ ಬೆನ್ನಟ್ಟಿರುವುದನ್ನು ಊಹಿಸಲೂ ಅಸಾಧ್ಯ. ಆದರೆ ಈ ಪ್ರಕರಣದಲ್ಲಿ ಅದು ನಿಜವಾಗಿದೆ.

ಯಾವುದೇ ಮನುಷ್ಯ ತನ್ನ ಮೇಲೆ ತಾನು ಆತ್ಮವಿಶ್ವಾಸ ಇಟ್ಟುಕೊಂಡರೆ ಎಂತಹ ಪರಿಸ್ಥಿತಿಯನ್ನೂ ಕೂಡಾ ಎದುರಿಸಿ ನಿಂತು ಜಯಶಾಲಿಯಾಗಬಹುದು ಎನ್ನುವುದನ್ನು ಈ ವೀಡಿಯೋ ನೋಡಿ ತಿಳಿಯಬಹುದು.

ಈ ವಿಚಿತ್ರ ಪ್ರಕರಣ ಸದ್ಯ ಎಲ್ಲೆಡೆ ಸಖತ್ ಸುದ್ದಿಯಾಗುತ್ತಿದೆ. ಈ ಘಟನೆ ಓದಿದ ತಕ್ಷಣ ನಿಮಗೆ ಆ ಸಿಂಹ ಮೃಗಾಲಯದ್ದಾಗಿರಬಹುದು. ಹೀಗಾಗಿಯೇ ಅದು ತುಸು ಸೌಮ್ಯ ಸ್ವಭಾವದ್ದಾಗಿರಬಹುದು ಎನ್ನಬಹುದು. ಆದರೆ ವಾಸ್ತವವಾಗಿ ಈ ಘಟನೆ ನಡೆದಿರುವುದು ಮೃಗಾಲಯದಲ್ಲಲ್ಲ. ಬದಲಾಗಿ ಕಾಡಿನಲ್ಲಿ.

https://www.instagram.com/reel/CdDnPfPlwdx/?utm_source=ig_web_copy_link

ಸಿಂಹವನ್ನು ಮನುಷ್ಯ ಉದ್ದನೆಯ ಕೋಲಿನ ಸಹಾಯದಿಂದ ಬೆದರಿಸಿ ಮರಳಿ ಓಡಿಸಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 56,000ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಮನುಷ್ಯನ ಆತ್ಮವಿಶ್ವಾಸ ನೆಟ್ಟಿಗರ ಮನಗೆದ್ದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.

Leave A Reply