ತನ್ನ ಶೂಟಿಂಗ್ ಸ್ಕಿಲ್ ಪ್ರದರ್ಶಿಸಲು ತನ್ನ ಮಗನ ಬಾಯಲ್ಲಿಟ್ಟಿದ್ದ ಸಿಗರೇಟಿಗೆ ಎಕೆ-47ನಲ್ಲಿ ಶೂಟ್ ಮಾಡಿದ ತಂದೆ!

0 14

ಜಗತ್ತಿನಲ್ಲಿ ಎಂತೆಂತಹ ವ್ಯಕ್ತಿಗಳು ಇರುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂಬಂತಿದೆ. ಹೌದು.ಇಲ್ಲೊಬ್ಬ ತಂದೆ ತನ್ನ
ಶೂಟಿಂಗ್ ಸ್ಕಿಲ್ ಪ್ರದರ್ಶಿಸಲು ತನ್ನ ಮಗನ ಬಾಯಲ್ಲಿಟ್ಟಿದ್ದ ಸಿಗರೇಟ್ ಅನ್ನೇ ಗುರಿಯಾಗಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಈತ ಇರಾಕಿನ ವ್ಯಕ್ತಿಯಾಗಿದ್ದು,ತನ್ನ ಮಾರ್ಕ್ಸ್‌ಮನ್‌ಶಿಪ್ ಪ್ರದರ್ಶಿಸಲು ತನ್ನ ಮಗನ ಬಾಯಲ್ಲಿಟ್ಟಿದ್ದ ಸಿಗರೇಟ್‌ನ್ನು ಗುರಿಯಾಗಿಟ್ಟುಕೊಂಡು ಎಕೆ-47ನೊಂದಿಗೆ ಗುಂಡು ಹಾರಿಸಿರುವ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವೈರಲ್ ಆದ ವೀಡಿಯೋದಲ್ಲಿ ಬಾಲಕನೊಬ್ಬ ಬಾಯಲ್ಲಿ ಸಿಗರೇಟ್‌ ಇಟ್ಟುಕೊಂಡಿದ್ದಾನೆ. ಇವನಿದ್ದ ಸ್ವಲ್ಪ ದೂರದಿಂದ ಆತನ ತಂದೆ ಎಕೆ-47ನಿಂದ ಅದನ್ನು ಗುರಿಯಾಗಿಸಿಕೊಂಡು ಶೂಟ್‌ ಮಾಡಿದ್ದಾನೆ.

ಈ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ.

Leave A Reply