ಕನ್ಯಾನ ಬಾಲಕಿ ಆತ್ಮಹತ್ಯೆ ಪ್ರಕರಣ : ಕುಟುಂಬಕ್ಕೆ10 ಲಕ್ಷ ಪರಿಹಾರಕ್ಕೆ ಭಜರಂಗದಳ ಆಗ್ರಹ | ಮೇ.9 ಮತಾಂತರ ವಿರೋಧಿಸಿ ಪ್ರತಿಭಟನೆ

ಪುತ್ತೂರು: ಬಂಟ್ವಾಳ ತಾಲೂಕಿನ ವಿಟ್ಲದ ಕನ್ಯಾನದ ಕಣಿಯೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕೆಂದು ಭಜರಂಗದಳ ಆಗ್ರಹಿಸಿದೆ.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಭಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಬಾಲಕಿ ಆತ್ಮಿಕಾ ಆತ್ಯಹತ್ಯೆಯಲ್ಲ. ಇದೊಂದು ವ್ಯವಸ್ಥಿತ ಕೊಲೆ.ಬಾಲಕಿಯನ್ನು ಪ್ರೀತಿಯ ನಾಟಕವಾಡಿ ಮತಾಂತರ ಮಾಡುವ ಉದ್ಧೇಶ ಆರೋಪಿ ಶಾಹುಲ್ ಹಮೀದ್ ನಲ್ಲಿತ್ತು ಎಂದು ಪ್ರಕರಣವನ್ನು ಗಮನಿಸಿದಾಗ ತಿಳಿದು ಬರುತ್ತದೆ. ಮುಗ್ಧ ಬಾಲಕಿಗೆ ಆಸೆ ಅಮಿಷಗಳನ್ನು ತೋರಿಸಿ, ವಾಮಾಚಾರ ಮಾಡಿರುವುದಾಗಿ ಬಾಲಕಿಯ ಪೋಷಕರು ಆರೋಪಿಸುತ್ತಿದ್ದು, ಇದಕ್ಕೆ ಆರೋಪಿಯ ಮನೆ ಮಂದಿಯೂ ಸಹಕರಿಸಿದ್ದಾರೆ. ಬಾಲಕಿಗೆ ಬುರ್ಖಾ ತೊಡಿಸಿ ಹೊರಗೆ ಕರೆದೊಯ್ದಿದ್ದು, ಇದರಲ್ಲಿ ಆರೋಪಿ ಮನೆಯವರ ಪಾತ್ರವೂ ಇದೆ.

ಈ ಕಾರಣಕ್ಕೆ ಆರೋಪಿಯ ಮನೆಯವರನ್ನೂ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಕಾರಣಕ್ಕೆ ಬಂಧಿಸಬೇಕೆಂದು ಅವರು ಒತ್ತಾಯಿಸಿದರು.

ಮತಾಂತರವನ್ನು ವಿರೋಧಿಸಿ ಮೇ 9 ರಂದು ಪುತ್ತೂರು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಸುದ್ದಿ ಗೋಷ್ಟಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆoಕಿಲ, ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಜಯಂತ ಕುಂಜೂರುಪಂಜ ಮೊದಲಾದವರಿದ್ದರು.

Leave A Reply

Your email address will not be published.