ಬೆಕ್ಕುಗಳಿಗೂ ನಾಯಿಗಳಿಗೂ ದ್ವೇಷ ಇರೋಕೆ ಕಾರಣ ಏನು ?

ನಾಯಿ ಆಗಿರಬಹುದು ಅಥವಾ ಬೆಕ್ಕು ಆಗಿರಬಹುದು…ಇವೆರಡು ಸಾಕು ಪ್ರಾಣಿಗಳು. ಮನುಷ್ಯನ ಸ್ನೇಹಿತ ಎಂದರೂ ತಪ್ಪಾಗಲಾರದು. ಆದರೆ ಇವೆರಡನ್ನೂ ನೀವು ಮನೆಯಲ್ಲಿ ಸಾಕಿದರೆ, ಇವುಗಳು ಒಬ್ಬರನ್ನೊಬ್ಬರು ಇಷ್ಟ ಪಡುವುದಿಲ್ಲ.

ಆದರೆ ಈ ಎರಡರ ನಡುವೆ ಸ್ನೇಹ ಕಂಡುಬರುವುದು ಬಲು ಅಪರೂಪ. ನಾಯಿಗಳು ನಾವು ನೋಡಿದ ಹಾಗೆ ಹೆಚ್ಚಿನ ಸಂದರ್ಭದಲ್ಲಿ ಬೆಕ್ಕುಗಳನ್ನು ಕಂಡರೆ ಅಟ್ಟಿಸಿಕೊಂಡು ಹೋಗುತ್ತವೆ. ಬೆಕ್ಕುಗಳು ಅವುಗಳ ವಿರುದ್ಧ ತಿರುಗಿ ನಿಲ್ಲುತ್ತವೆ. ಏಕೆ ಈ ಎರಡರ ನಡುವೆ ಅಷ್ಟೊಂದು ದ್ವೇಷ? ಇದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ. ಅವರು ತಿಳಿಸಿದಂತಹ ಕಾರಣಗಳು ಇಲ್ಲಿವೆ.

ಬೆಕ್ಕು ಹಾಗೂ ನಾಯಿ ಪರಸ್ಪರ ಇಷ್ಟಪಡದಿರಲು ಪ್ರಮುಖ ಕಾರಣ ಅವುಗಳ ಸ್ವಭಾವ. ನಾಯಿಯು ಗುಂಪಿನಲ್ಲಿರಲು ಇಷ್ಟಪಡುತ್ತದೆ. ಆದರೆ ಬೆಕ್ಕು ಒಂಟಿಯಾಗಿರಲು ಇಷ್ಟಪಡುತ್ತದೆ.

ಸ್ನೇಹಜೀವಿಯಾದ ನಾಯಿಗಳು ಬೆಕ್ಕನ್ನು ಮೊದಲು ನೋಡಿದಾಗ ಸ್ನೇಹಿತರಂತೆ ಅವುಗಳನ್ನು ಮಾತನಾಡಿಸಲು ಮುಂದೆ ಹೋಗುತ್ತದೆ. ಬೆಕ್ಕಿನ ಬಳಿ ಬಂದು ಬಾಲ ಅಲ್ಲಾಡಿಸುತ್ತಾ ದೇಹದ ವಾಸನೆಯನ್ನು ಪಡೆಯುತ್ತವೆ. ಆದರೆ ಬೆಕ್ಕಿಗೆ ಈ ವರ್ತನೆ ಇಷ್ಟವಾಗುವುದಿಲ್ಲ. ನಾಯಿಗಳು ಬಾಲವನ್ನು ಅಲ್ಲಾಡಿಸುವ ಮೂಲಕ ತಮ್ಮ ಸ್ನೇಹವನ್ನು ವ್ಯಕ್ತಪಡಿಸುತ್ತವೆ ನಿಜ. ಆದರೆ ಬೆಕ್ಕುಗಳಿಗೆ ಬಾಲ ಅಲ್ಲಾಡಿಸಿದಾಗ ಸ್ವಭಾವ ಸಹಜವಾದ ಕೋಪ, ಕಿರಿಕಿರಿ ಆಗುತ್ತದೆ.

ಇವೆರಡರ ಈ ವಿರುದ್ಧ ಸ್ವಭಾವದಿಂದಾಗಿ ಒಬ್ಬರಿಗೊಬ್ಬರು ಸ್ನೇಹದಿಂದ ವರ್ತಿಸಲು ಸಾದ್ಯವಾಗುವುದಿಲ್ಲ. ಸ್ನೇಹಕ್ಕಾಗಿ ನಾಯಿ ಬೆಕ್ಕಿನ ಬಳಿಗೆ ಬಂದರೂ ಬೆಕ್ಕು ಅದರಿಂದ ದೂರವಿರಲು ಪ್ರಯತ್ನಿಸುತ್ತದೆ.

ಆದರೆ ನಾಯಿ ಬೆಕ್ಕುಗಳು ಸಣ್ಣ ಮರಿಯಿದ್ದಾಗಿನಿಂದ ಜೊತೆಗೆ ಬೆಳೆದು, ಸ್ನೇಹದಿಂದ ಇರುವ ನಿದರ್ಶನಗಳನ್ನು ನಾವು ಕಣ್ಣಾರೆ ನೋಡುತ್ತೇವೆ., ಅದಾಗ್ಯೂ ಸ್ವಭಾವತಃ ಅವುಗಳು ಏಕೆ ವಿರುದ್ಧ ಎನ್ನುವುದನ್ನು ಮೇಲೆ ವಿವರಿಸಲಾಗಿದೆ.

Leave A Reply

Your email address will not be published.