ಈ ಚಿತ್ರದಲ್ಲಿ ಅಡಗಿರುವ ಮುಖಗಳೆಷ್ಟು ಪತ್ತೆ ಮಾಡಬಲ್ಲಿರಾ…..?

ಈ ಒಂದು ಚಿತ್ರ ನಿಮ್ಮ ಮೆದುಳಿಗೆ ತುಂಬಾನೇ ಕೆಲಸ ಕೊಡಲಿದೆ. ನಿಮಗೊಂದು ಕಠಿಣ ಸವಾಲು ಇದು. ಈ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂದು ಪತ್ತೆ ಮಾಡಬೇಕು.

ಪಜಲ್, ಮೈಂಡ್ ಗೇಮ್ಸ್ ಸುಡೊಕುನಂತಹ ಗೇಮ್ ಗಳನ್ನು ಪರಿಹರಿಸಿದಷ್ಟು ಸುಲಭದ ಕೆಲಸ‌ ಇದಲ್ಲ‌.
ಈ ಪೇಂಟಿಂಗ್ ನಲ್ಲಿ ಒಂದಕ್ಕಿಂತ ಹೆಚ್ಚು ಮುಖಗಳಿವೆ. ಎಷ್ಟಿವೆ ಎಂಬುದನ್ನು ಪತ್ತೆ ಮಾಡುವುದಷ್ಟೆ ನಿಮ್ಮ ಕೆಲಸವಾಗಿದೆ. ಬೇವ್ ಡೂಲಿಟಲ್ ಎಂಬ ಕಲಾವಿದ ಈ ಪೇಂಟಿಂಗ್ ಅನ್ನು ರಚಿಸಿದ್ದು, ಇದಕ್ಕೆ ‘ದಿ ಫಾರೆಸ್ಟ್ ಹ್ಯಾಸ್ ಐಸ್’ ಎಂದು ಹೆಸರಿಸಲಾಗಿದೆ.


Ad Widget

Ad Widget

Ad Widget

ಗುಡ್ಡಗಾಡು ಪ್ರದೇಶದಲ್ಲಿ ಕಲ್ಲುಗಳು, ಮರಗಳು ಮತ್ತು ಇಬ್ಬರು ಕುದುರೆ ಸವಾರರು ಇರುವಂತೆ ಚಿತ್ರದಲ್ಲಿ ಕಾಣಿಸುವ ಈ ಚಿತ್ರವನ್ನು ಸೂಕ್ಷ್ಮವಾಗಿ ನೋಡಿ ಎಷ್ಟು ಮುಖಗಳಿವೆ ಎಂದು ಪತ್ತೆ ಹಚ್ಚಿ. ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಕಲ್ಲುಗಳ ಮೇಲೆ ಕೆಲವು ಮುಖಗಳನ್ನು ನೋಡಬಹುದಾಗಿದೆ. ಸಾಮಾನ್ಯವಾಗಿ ಈ ಚಿತ್ರದಲ್ಲಿ 4 ಮುಖಗಳನ್ನು ಕಾಣಲಾಗುತ್ತದೆ. ಆದಾಗ್ಯೂ, ನಿಮ್ಮ ಬುದ್ಧಿಮತ್ತೆ ಚುರುಕಾಗಿದ್ದರೆ, ನಿಮಗೆ ಇಂತಹ 13 ಮುಖಗಳು ಕಾಣಿಸುತ್ತವೆ.

Leave a Reply

error: Content is protected !!
Scroll to Top
%d bloggers like this: