ಮದುವೆಯಾಗಲು ಒಪ್ಪುತ್ತಿಲ್ಲ ಎಂದು ಸಿಟ್ಟುಗೊಂಡ ಹುಡುಗಿ, ಸಂಭೋಗದ ವೇಳೆ ಕಾಂಡೋಮ್‌ಗೆ ರಂಧ್ರ ಮಾಡಿದಳು!!!

ಆಕೆಗೆ ಆತನ ಮೇಲೆ ಅದಮ್ಯ ಪ್ರೀತಿ. ಆದರೆ ಏನು ಮಾಡುವುದು? ಆತನಿಗೆ ಮದುವೆಯಾಗಲು ಇಷ್ಟವಿಲ್ಲ. ಹೀಗಾಗಿ ಈ ಮಹಿಳೆ ಒಂದು ಉಪಾಯ ಮಾಡುತ್ತಾಳೆ. ಸಂಭೋಗ ಮಾಡುವಾಗ ಕಾಂಡೋಮ್ ಗೆ ರಂಧ್ರ ಮಾಡುತ್ತಾಳೆ. ಆದರೆ ಈ ವಿಷಯ ಬಾಯ್ ಫ್ರೆಂಡ್ ಗೆ ಗೊತ್ತಿರುವುದಿಲ್ಲ. ತಿಳಿದ ನಂತರ ಬಾಯ್ ಫ್ರೆಂಡ್ ಏನು ಮಾಡುತ್ತಾನೆ ? ಇಲ್ಲಿದೆ ಕುತೂಹಲಕಾರಿ ವಿಷಯ.

ಈ ವಿಚಿತ್ರ ಪ್ರಕರಣ ನಡೆದಿರುವುದು ಜರ್ಮನಿಯಲ್ಲಿ. ಬಾಯ್ ಫ್ರೆಂಡ್‌ ಜೊತೆ ಮದುವೆಯಾಗುವ ಉದ್ದೇಶದಿಂದ ಆತನೊಂದಿಗೆ ದೈಹಿಕ ಸಂಪರ್ಕ ನಡೆಸುತ್ತಿದ್ದ ವೇಳೆ ಆತನಿಗೆ ಗೊತ್ತಾಗದ ರೀತಿಯಲ್ಲಿ ಕಾಂಡೋಮ್‌ಗೆ ರಂಧ್ರ ಮಾಡಿ, ಯುವತಿಯೋರ್ವಳು ಸಂಕಷ್ಟಕ್ಕೆ ಸಿಲುಕಿದ್ದಾಳೆ.


Ad Widget

Ad Widget

Ad Widget

ಆನ್‌ಲೈನ್ ಮೂಲಕ ಪರಿಚಯವಾದ 39 ವರ್ಷದ ಮಹಿಳೆ ಹಾಗೂ 42 ವರ್ಷದ ಪುರುಷನೊಂದಿಗೆ ವಾಸವಾಗಿದ್ದಾಳೆ‌. ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಈ ವೇಳೆ ದೈಹಿಕ ಸಂಪರ್ಕವೂ ನಡೆದಿದೆ. ಆತನನ್ನು ವಿಪರೀತ ಹಚ್ಚಿಕೊಂಡ ಯುವತಿ ಮದುವೆ ಮಾಡಿಕೊಳ್ಳುವಂತೆ ತಿಳಿಸಿದ್ದಾಳೆ. ಆದರೆ, ಇದಕ್ಕೆ ಆತ ಒಪ್ಪಲಿಲ್ಲ. ತಾನು ಗರ್ಭಿಣಿಯಾದರೆ ಆತ ತನ್ನನ್ನು ಮದುವೆಯಾಗುತ್ತಾನೆಂದು ಆಕೆ ಯೋಚಿಸಿದ್ದಾಳೆ.
ದೈಹಿಕ ಸಂಬಂಧದ ಗೊತ್ತಾಗದ ರೀತಿಯಲ್ಲಿ ಕಾಂಡೋಮ್‌ಗೆ ರಂಧ್ರ ಮಾಡಿದ್ದಾಳೆ. ಇದಾದ ಬಳಿಕ ಮೆಸೇಜ್ ಮಾಡಿದ್ದು, ನಾನು ಗರ್ಭಿಣಿಯಾಗಿದ್ದೇನೆಂದು ಅನಿಸುತ್ತದೆ ಎಂದು ಹೇಳಿದ್ದಾಳೆ. ನಂತರ ತಾನು ಮಾಡಿದ ಕೃತ್ಯವನ್ನೂ ಹೇಳಿದ್ದಾಳೆ. ಇದರಿಂದ ಕುಪಿತನಾದ ಬಾಯ್ ಫ್ರೆಂಡ್ ಮಹಿಳೆ ಮೇಲೆ ಕ್ರಿಮಿನಲ್ ದೂರು ದಾಖಲು ಮಾಡಿದ್ದಾನೆ.

ದೈಹಿಕ ಸಂಬಂಧದ ವೇಳೆ ತನಗೆ ಗೊತ್ತಿಲ್ಲದ ರೀತಿಯಲ್ಲಿ ಕಾಂಡೋಮ್‌ಗೆ ರಂಧ್ರ ಮಾಡಿದ್ದು, ಇದೊಂದು ಕ್ರಿಮಿನಲ್ ಕೇಸ್ ಆಗಿದೆ ಎಂದು ಕೋರ್ಟ್ ಮೊರೆ ಹೋಗಿದ್ದಾನೆ. ನನಗೆ ಅರಿವಿಲ್ಲದ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಕಾಂಡೋಮ್‌ಗೆ ರಂಧ್ರ ಮಾಡಿದ್ದಕ್ಕಾಗಿ ಆಕೆಗೆ ಆರು ತಿಂಗಳ ಜೈಲು ಸಜೆ ವಿಧಿಸಲಾಗಿದೆ ಎಂದು ಅಲ್ಲಿನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಒಂದು ವೇಳೆ ಇಂಥದ್ದೇ ಪ್ರಕರಣ ಭಾರತದಲ್ಲಿ ನಡೆದಿದ್ದರೆ ಕೋರ್ಟು ಏನು ತೀರ್ಪು ನೀಡಿರ್ತಿತ್ತು ? ಇದು ನಿಮ್ಮ ಊಹೆಗೆ ಮತ್ತು ಕ್ರಿಯೇಟಿವ್ ಯೋಚನೆಗೆ ಬಿಟ್ಟಿದ್ದು.

Leave a Reply

error: Content is protected !!
Scroll to Top
%d bloggers like this: