ಅಲೆಯುವ ಮನಗಳಿಗೆ ಉಡುಪಿಯಲ್ಲಿದೆ ತೇಲುವ ಸೇತುವೆ; ಇಲ್ಲಿದೆ ನೋಡಿ ಹೆಚ್ಚಿನ ವಿವರ

ತೂಗು ಸೇತುವೆ, ಗಾಜಿನ ಸೇತುವೆ ನೋಡಿರುತ್ತಿರಾ ಆದರೆ ಉಡುಪಿಯಲ್ಲಿ ಇಂದು ತೇಲುವ ಸೇತುವೆ ಉದ್ಘಾಟನೆಯಾಗಿದೆ. ತೇಲುತ್ತಾ ಸೇತುವೆಯ ಮೇಲೆ ಇರುವಾಗ, ಸಂದರ್ಶಕನು ಸಮುದ್ರದ ಅಲೆಗಳ ಚಲನೆಯನ್ನು ಅನುಭವಿಸಬಹುದು ಮತ್ತು ಅದರ ಮೇಲೆ ನಡಿಗೆಯನ್ನು ಅನುಭವಿಸಬಹುದು.


Ad Widget

Ad Widget

Ad Widget

ಉಡುಪಿಯ ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರ ಆಕರ್ಷಣೆಗೆ ತೇಲುವ ಸೇತುವೆಯನ್ನು ವ್ಯವಸ್ಥೆಗೊಳಿಸಲಾಗಿದೆ. ಕರ್ನಾಟಕ ರಾಜ್ಯದಲ್ಲೇ ಇದು ಪ್ರಥಮ ತೇಲುವ ಸೇತುವೆ  ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಈ ತೇಲುವ ಸೇತುವೆ ಒಂದು ರೀತಿಯಲ್ಲಿ ಸಾಹಸ ಕ್ರೀಡೆಯಾಗಿದ್ದು ಈ ಸೇತುವೆ 100 ಮೀ. ಉದ್ದವಿದೆ. 3.5 ಮೀಟರ್ ಅಗಲ ವಿಸ್ತೀರ್ಣವನ್ನು ಹೊಂದಿದೆ. ಲೈಫ್ ಜಾಕೆಟ್ ಧರಿಸಿ 15 ನಿಮಿಷಗಳ ಕಾಲ ಸೇತುವೆಯ ಮೇಲೆ ನಡೆಯಬಹುದು. ಪ್ರವಾಸಿಗರ ಸುರಕ್ಷತೆಗಾಗಿ ಸೇತುವೆಯ ಮೇಲೆ 10 ಲೈಫ್ ಗಾರ್ಡ್‌ಗಳು ಮತ್ತು 30 ಲೈಫ್‌ಬಾಯ್ ರಿಂಗ್‌ಗಳು ಇರುತ್ತವೆ. 

Leave a Reply

error: Content is protected !!
Scroll to Top
%d bloggers like this: