ಉರಿ ಬಿಸಿಲಿನಿಂದ ದಣಿದ ಜೀವಗಳಿಗೆ ಪುಟ್ಟ ಬಾಲಕ ಮಾಡಿದ ದೊಡ್ಡ ಕಾರ್ಯ!

ಕಷ್ಟ ಎಂದವನ ಹೆಗಲಿಗೆ ಹೆಗಲಾಗುವವನೇ ನಿಜವಾದ ಮಾನವ.ಇಂತಹ ಉರಿಬಿಸಿಲಿನಲ್ಲಿ ಸೋತು ಬಾಯಾರಿಕೆಯಲ್ಲಿ ದಣಿದವರಿಗೆ ಒಂಚೂರು ನೀರು ನೀಡಿದರೆ ಅವರ ಆಶೀರ್ವಾದಕ್ಕಿಂತ ಉತ್ತಮ ಬೇರೊಂದಿಲ್ಲ ಅಲ್ವಾ!?.ಹೌದು. ಇಂತಹ ಒಂದು ಉತ್ತಮ ಕೆಲಸ ಮಾಡಿ ಈ ಪುಟ್ಟ ಬಾಲಕನಿಗೆ ದೊರೆತ ಬ್ಲೆಸಿಂಗ್ ನೋಡಿ.

ಸಹಾಯ ಮಾಡಬೇಕೆಂದರೆ ವಯಸ್ಸಿನ ಅವಶ್ಯಕತೆಯಿರುವುದಿಲ್ಲ ಎಂಬುದಕ್ಕೆ ಈ ವಿಡಿಯೋ ಉದಾಹರಣೆಯಂತಿದ್ದು,ಈ ಬಾಲಕನ ಕಾರ್ಯ ಇಂದಿನ ಪೀಳಿಗೆಗೆ ಮಾದರಿ ಎಂಬಂತಿದೆ. ದುಡ್ಡಿದ್ದರೆ ಸ್ವಲ್ಪವೂ ದಾನ ಮಾಡದೆ, ಸ್ವಾರ್ಥಕ್ಕಾಗಿ ಬದುಕುವ ಕೆಲವು ಜನರ ಮಧ್ಯೆ ಬಾಲಕನ ಮಾನವೀಯ ಕಾರ್ಯ ಮೆಚ್ಚುವಂತದ್ದೇ.ಅಷ್ಟಕ್ಕೂ ಆ ಪುಟ್ಟ ಬಾಲಕನ ದೊಡ್ಡ ಕೆಲಸ ನೀವೇ ನೋಡಿ.

ಅಯಾನ್ ಎಂಬ ಪುಟ್ಟ ಬಾಲಕ ಬೀದಿ ಬದಿ ತರಕಾರಿ, ಹಣ್ಣು ಹೂವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವ ಜನರಿಗೆ ನೀರಿನ ಬಾಟಲಿಯನ್ನು ನೀಡಿದ್ದಾನೆ.ಈ ಮೂಲಕ ದಾಹ ನೀಗಿಸಿ ಮಾನವೀಯತೆ ಮೆರೆದಿದ್ದಾರೆ.ಬಾಲಕನ ಈ ಕಾರ್ಯಕ್ಕೆ ಮನಸೋತ ಅಜ್ಜಿಯೊಬ್ಬರು ಆತನಿಗೆ ಆಶೀರ್ವಾದವನ್ನು ಸಹ ಮಾಡಿದ್ದು,ಈ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.

ಇನ್ನು ಐಎಎಸ್‌ ಅಧಿಕಾರಿ ಅವನೀಶ್‌ ಎಂಬವರು ಈ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, 2 ಗಂಟೆಯಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಮೆಚ್ಚುಗೆ ಸೂಚಿಸಿ ಕಮೆಂಟ್‌ ಜೊತೆಗೆ ಲೈಕ್‌ಗಳನ್ನು ಸಹ ಮಾಡಿದ್ದಾರೆ.

Leave A Reply

Your email address will not be published.