ಶಾಲಾ ಮಕ್ಕಳ ಬೇಸಿಗೆ ರಜೆಯಲ್ಲಿ ತುಂಬಿ ತುಳುಕುತ್ತಿದೆ ಪುಣ್ಯ ಕ್ಷೇತ್ರ ಕುಕ್ಕೇ!! ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ

ಸುಬ್ರಹ್ಮಣ್ಯ :ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಉಳಿದುಕೊಳ್ಳಲು ವಸತಿ ವ್ಯವಸ್ಥೆ ಸಿಗದೆ ಬೀದಿಯಲ್ಲಿ ಮಲಗುತ್ತಿರುವುದು ಕಂಡು ಬಂದಿದೆ.

ದೇವಸ್ಥಾನದಲ್ಲಿ ಖಾಸಗಿಯಾಗಿ ಹಲವು ವಸತಿ ಗೃಹಗಳಿದ್ದು,ದೇವಸ್ಥಾನ ಸಭಾಂಗಣ, ಹಳೆ ಪ್ರಾಥಮಿಕ ಶಾಲಾ ಕಟ್ಟಡಗಳೂ ಇದೆ ಆದರೂ ಇತ್ತೀಚಿನ
ದಿನಗಳಲ್ಲಿ ಭಕ್ತರು, ಮಹಿಳೆಯರು ಮಕ್ಕಳ ಸಹಿತ ರಥ ಬೀದಿಯಲ್ಲಿ ಹಾಗೂ ಧರ್ಮಸಮ್ಮೇಳನ ಮಂಟಪದಲ್ಲಿ ರಾತ್ರಿ ವೇಳೆಯಲ್ಲಿ ಮಲಗುತ್ತಿರುವುದು ಕಂಡು ಬರುತ್ತಿದೆ.

ಭಕ್ತಾದಿಗಳಿಗೆ ಮಲಗಲು ವ್ಯವಸ್ಥೆ ಮಾಡುವ ವ್ಯವಸ್ಥೆಗಳಿದ್ದರೂ ಭಕ್ತರು ರಸ್ತೆಯಲ್ಲಿ ಮಲಗಬೇಕಾಗಿ
ಬಂದದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ,ಇಲ್ಲಿ ವಸತಿ ವ್ಯವಸ್ಥೆಗಳು ಇವೆ ಆದರೆ ಮಾಹಿತಿ ಕೊರತೆಯಿಂದ ಅದನ್ನು ಬಳಸಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಅಭಿಪ್ರಾಯ ಇನ್ನೊಂದು ಕಡೆಯಿಂದ ವ್ಯಕ್ತವಾಗಿದೆ.ಹೀಗಾಗಿ ದೇವಸ್ಥಾನದಿಂದ ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ
ದೇವಾಲಯದ ವತಿಯಿಂದ ವಸತಿಗೃಹಗಳಲ್ಲಿ ಕೊಠಡಿಗಳನ್ನು ನೀಡಲಾಗುತ್ತಿದೆ. ಆದರೆ ವಸತಿಗೃಹಗಳಲ್ಲಿ ಕೊಠಡಿಗಳು ಭರ್ತಿಯಾದ ನಂತರದ ಸಂದರ್ಭಗಳಲ್ಲಿ ಶ್ರೀ ದೇವಳದ ಆದಿಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಮತ್ತು ಷಣ್ಮುಖ ಪ್ರಸಾದ ಭೋಜನಶಾಲೆಯ ಮೇಲ್ಮಹಡಿಯಲ್ಲಿ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿದೆ. ಭಕ್ತರು ಇದರ ಉಪಯೋಗ ಪಡೆದುಕೊಳ್ಳಬೇಕಾಗಿ ಮನವಿ ಮಾಡಲಾಗಿದೆ, ಎಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

Leave A Reply

Your email address will not be published.