ಆರ್‌ಸಿಬಿ-ಸಿಎಸ್‌ಕೆ ಲೈವ್ ಪಂದ್ಯದ ವೇಳೆ ತನ್ನ ಗೆಳೆಯನಿಗೆ ಮಂಡಿಯೂರಿ ಪ್ರಪೋಸ್ ಮಾಡಿದ ಹುಡುಗಿ !!- ವೀಡಿಯೋ ವೈರಲ್

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ, ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ರೋಚಕ ಹಣಾಹಣಿ ನಡೆಯುತ್ತಿತ್ತು. ಆದರೆ ಈ ನಡುವೆ ಎಲ್ಲರ ಗಮನ ಅರೆಕ್ಷಣ ಪಂದ್ಯದಿಂದ ಒಂದು ಜೋಡಿಯ ಕಡೆಗೆ ತಿರುಗಿದೆ. ಆರ್‌ಸಿಬಿ ಫ್ಯಾನ್ ಒಬ್ಬಳು ಹುಡುಗನಿಗೆ ಪ್ರೊಪೋಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ನ ಇನಿಂಗ್ಸ್ ನ 11ನೇ ಓವರ್ ನಡೆಯುತ್ತಿದ್ದ ವೇಳೆ ಹುಡುಗಿಯೊಬ್ಬಳು ಮಂಡಿಯೂರಿ ತನ್ನ ಗೆಳೆಯನಿಗೆ ಲವ್ ಪ್ರಪೋಸ್ ಮಾಡಿದ್ದಾಳೆ. ಇದನ್ನು ಹುಡುಗ ಒಪ್ಪಿಕೊಂಡಿದ್ದಾನೆ. ನಂತರ ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.


Ad Widget

Ad Widget

Ad Widget

ಹುಡುಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ಧರಿಸಿದ್ದು, ಹುಡುಗಿ ಕೂಡ ಕೆಂಪು ಬಣ್ಣದ ಡ್ರೆಸ್ ಧರಿಸಿದ್ದಳು. ಪ್ರಪೋಸ್ ಮಾಡಿದಾಗ ಮೈದಾನದಲ್ಲಿ ಗದ್ದಲ, ಚಪ್ಪಾಳೆ ಸದ್ದು ಜೋರಾಗಿತ್ತು.

ಐಪಿಎಲ್ ಮ್ಯಾಚ್ ವೇಳೆ ಮೈದಾನದಲ್ಲಿ ಇಂತಹ ಪ್ರಸಂಗಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಪ್ರೇಕ್ಷಕರು ಮಾತ್ರವಲ್ಲ, ಆಟಗಾರರು ಕೂಡ ಇಂತಹ ಪ್ರಪೋಸ್ ಮಾಡಿದ್ದಾರೆ. ಕಳೆದ ವರ್ಷ ಮೈದಾನದಲ್ಲಿಯೇ ಪಂದ್ಯ ಮುಗಿದ ಕೂಡಲೇ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಹಾರ್ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದರು. ಐಪಿಎಲ್ ಮುಗಿದ ನಂತರ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: